Yuvanidhi scheme Registration

Yuvanidhi scheme Registration : ಯುವನಿಧಿ ಯೋಜನೆಯಡಿ ತಮ್ಮ ಹೆಸರು ನೋಂದಾಯಿಸಲು ಜನವರಿ 20 ರವರಗೆ ಕಾಲಾವಕಾಶವಿದೆ.

ಹೌದು, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆಯಡಿ ಫಲಾನುಭವಿಗಳ ನೋಂದಣಿ ಪ್ರಕ್ರೀಯು ಚಾಲ್ತಿಯಲ್ಲಿದ್ದು, ಈ ಸಂಬಂಧ 2022-23 ಹಾಗೂ 2023-24ನೇ ಸಾಲಿನಲ್ಲಿ ಪದವಿ/ ಡಿಪ್ಲೋಮಾ ತೇರ್ಗಡೆ ಹೊಂದಿದ ನಿರುದ್ಯೋಗ ಅಭ್ಯರ್ಥಿಗಳನ್ನು ‘ಯುವನಿಧಿ’ ಯೋಜನೆಯಡಿ

https://sevasindhugs.karnataka.gov.in

ಸೇವಾಸಿಂಧು ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಜನವರಿ 20 ರವರೆಗೆ ವಿಶೇಷ ನೋಂದಣಿ ಅಭಿಯಾನ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Yuvanidhi scheme Registration ಯಾರು ಯಾರು ಅರ್ಜಿ ಸಲ್ಲಿಸಲಾಗಿದೆ?

ಈ ವಿಶೇಷ ನೋಂದಣಿ ಅಭಿಯಾನ” ವನ್ನು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲೆಯ ಎಲ್ಲಾ ವಿಶ್ವವಿದ್ಯಾಲಯಗಳು, ಸರ್ಕಾರಿ/ ಅನುದಾನಿತ ಪದವಿ/ಡಿಪ್ಲೋಮಾ, ತಾಲ್ಲೂಕು ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು. ಪದವೀದರರಿಗೆ ಪ್ರತಿ ತಿಂಗಳು  3,000 ರೂ. ಹಾಗೂ ಡಿಪ್ಲೋಮಾ ಪದವೀದರರಿಗೆ 1500 ರೂ. ನಿರುದ್ಯೋಗಿ ಭತ್ಯೆಯನ್ನು ನೀಡಲಾಗುತ್ತದೆ. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು  ಪೂರೈಸಿ  ಹೆಸರನ್ನು ನೊಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ Tadpatri Subsidy ಸಬ್ಸಿಡಿಯಲ್ಲಿ ತಾಡಪತ್ರಿ ನೀಡಲು ಅರ್ಜಿ ಆಹ್ವಾನ

ನಂತರ ಮಾಹೆವಾರು ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಿದ್ದಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ  ಪ್ರತಿ ತಿಂಗಳು  ತಾವು ನಿರುದ್ಯೋಗಿಯೆಂದು, ಉನ್ನತ ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೊಗವಿಲ್ಲವೆಂದು ಪ್ರತಿ ತಿಂಗಳು 25ನೇ ತಾರೀಖಿನೊಳಗಾಗಿ ಸ್ವಯಂ ಘೋಷಣೆ ಆಧಾರದ ಮೇಲೆ ಅಭ್ಯರ್ಥಿಗಳು  ಮುಂದಿನ ಪಾವತಿಯನ್ನು ಸ್ವೀಕರಿಸಬಹುದಾಗಿದೆ.

ಅಭ್ಯರ್ಥಿಗಳು ಕರ್ನಾಟಕ ಒನ್/ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ  ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆ ಹಾಗೂ ಆಧಾರ ಲಿಂಕ್ಡ್ ಮೊಬೈಲ್ ನಂಬರನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಿದ ನಂತರ ಸೇವಾ ಸಿಂಧು  ಪೋರ್ಟಲ್‌ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುವುದನ್ನು  ಪರಿಶೀಲಿಸಿಕೊಂಡು, ಒಂದು ವೇಳೆ ಅರ್ಜಿಯು ಅಪ್ರೂವಾಗದ ಸಂದರ್ಭದಲ್ಲಿ ಸೂಚಿಸಲ್ಪಟ್ಟ ಇಲಾಖೆಯ ಕಛೇರಿಗಳಿಗೆ ತಮ್ಮ ಎಲ್ಲಾ ಮೂಲ ಅಂಕಪಟ್ಟಿ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಖೂದ್ದಾಗಿ ಭೇಟಿ ನೀಡಿ ಅಪ್ರೂವ್ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ  ಕಚೇರಿ ದೂರವಾಣಿ ಸಂಖ್ಯೆ 08472-274846 ನ್ನು  ಸಂಪರ್ಕಿಸಲು ಕೋರಲಾಗಿದೆ.

ಜನವರಿ 17 ರಂದು ಮಿನಿ ಉದ್ಯೋಗ ಮೇಳ

ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಜನವರಿ 17 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಆಶೀರ್ವಾದ ಮೈಕ್ರೋ ಫೈನಾನ್ಸ್ದಲ್ಲಿ ಫೀಲ್ಡ್ ಡೆವಲಪ್‌ಮೇಂಟ್ ಆಫೀಸರ್ ಹುದ್ದೆಗೆ ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.

ಟ್ರಾನ್‌ಕಾನ್ ಆಟೋಮೇಷನ್ ಆಂಡ್ ಕನ್ವೇಯರ್ಸ್ದಲ್ಲಿ ಸೇಲ್ಸ್ ಇಂಜಿನಿಯರ್ ಹುದ್ದೆಗೆ ಬಿ.ಇ/ ಬಿ.ಟೆಕ್ / ಡಿಪ್ಲೋಮಾ (ಮೆಕ್ಯಾನಿಕಲ್ ಮಾತ್ರ) ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಬ್ಲೂಸ್ಮಾರ್ಟ್ ಕ್ಯಾಬ್ (ಇವಿ) ದಲ್ಲಿ ಡ್ರೆವರ್ ಹುದ್ದೆಗೆ ಎಸ್.ಎಸ್.ಎಲ್.ಸಿ./ಪಿಯುಸಿ/ಐಟಿಐ/ ಯಾವುದೇ ಪದವಿ ಪಾಸಾಗಿರಬೇಕು.  ವಯೋಮಿತಿ 21 ರಿಂದ 50 ವರ್ಷದೊಳಗಿರಬೇಕು.

ಸ್ವತಂತ್ರ ಮೈಕ್ರೋ ಫೈನಾನ್ಸ್ ನಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ/ ಐಟಿಐ/ ಡಿಪ್ಲೋಮಾ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 27 ವರ್ಷದೊಳಗಿರಬೇಕು. ಬ್ರಾö್ಯಂಚ್ ಮ್ಯಾನೇಜರ್ ಹುದ್ದೆಗೆ ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

By admin

Leave a Reply

Your email address will not be published. Required fields are marked *