Varunamitra number: ಮಳೆ ಯಾವಾಗ ಬರುತ್ತದೆ ಯಾವ ಪ್ರಮಾಣದಲ್ಲಿ ಬರುತ್ತದೆ ಎಲ್ಲೆಲ್ಲಿ ಬರುತ್ತದೆ. ಇಂದಿನ ಹವಮಾನ ಹೇಗಿರಲಿದೆ ಎಂಬ ಮಾಹಿತಿಗೆ ರೈತರೀಗ ಚಿಂತೆ ಮಾಡಬೇಕಿಲ್ಲ.
ಹೌದು, ರೈತರಿಗಾಗಿಯೇ ವರುಣಮಿತ್ರ ಸಹಾಯವಾಣಿ ನಂಬರ್ ಆರಂಭಿಸಲಾಗಿದೆ. ರೈತರು ಈಗ ಮನೆಯಲ್ಲಿಯೇ ಕುಳಿತು ಮಾಡಿ ಹವಾಮಾನ ವರದಿಯನ್ನು ಪಡೆಯಬಹುದು ಇದರೊಂದಿಗೆ ಅಂದು ಗಾಳಿ ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಬೀಸುತ್ತದೆ? ಅಂದಿನ ವಾತಾವರಣಹೇಗಿರುತ್ತದೆ ಎಂಬ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದ. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಮಾಹಿತಿ.
ರೈತರು ಮಳೆಯ ಮಾಹಿತಿ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ. ದಿನಪತ್ರಿಕೆ ಓದಬೇಕಿಲ್ಲ. ನ್ಯೂಸ್ ನೋಡಬೇಕಿಲ್ಲ. ಯಾವ ಅಧಿಕಾರಿಗೂ ಕರೆ ಮಾಡಬೇಕಿಲ್ಲ, ನಿಮ್ಮಬಳಿಯಿರುವ ಮೊಬೈಲ್ ನಿಂದ ಒಂದು ವರುಮಮಿತ್ರ ಸಹಾಯವಾಣಿ ನಂಬರಿಗೆ ಕರೆ ಮಾಡಿದರೆ ಸಾಕು, ನಿಮಗೆ ಎಲ್ಲಾ ಮಾಹಿತಿ ಕುಳಿತಲ್ಲೇ ಸಿಗುತ್ತದೆ.
Varunamitra number ಇಲ್ಲಿದೆ
ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಈ ನಂಬರಿಗೆ ಕರೆ ಮಾಡಿದರೆ ಸಾಕು ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ. ಈ ಉಚಿತ ಸಹಾಯವಾಣಿಯು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ರೈತರು ಯಾವುದೇ ಸಮಯದಲ್ಲಿ ಕರೆ ಮಾಡಿ ಮಳೆಯ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನೂ ಓದಿ Surya Ghar scheme ಯಡಿ ಉಚಿತ ವಿದ್ಯುತ್ ಹೀಗೆ ಪಡೆಯಿರಿ
ಈ ಸಹಾಯವಾಣಿ ನಂಬರಿನಿಂದ ಅಂದಿನ ಹವಾಮಾನ, ಗಾಳಿಯ ವೇಗ, ಗಾಳಿ ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಬಿಸಲಿದೆ? ಮಳೆಯ ಪ್ರಮಾಣ ಹೇಗಿರಲಿದೆ, ಗುಡುಗು ಮಿಂಚು ಇರಲಿದೆಯೇ ಎಂಬ ಮಾಹಿತಿ ಪಡೆಯಬಹುದು. ಇದರೊಂದಿಗೆ ಮುಂದಿನ ದಿನಗಳಲ್ಲಿ ನಿಮ್ಮೂರಿನ ಸುತ್ತಮುತ್ತ ವಾತಾವರಣ ಹೇಗಿರಲಿದೆ ಎಂಬ ಮಾಹಿತಿ ಸಹ ತಿಳಿದುಕೊಳ್ಳಬಹುದು.
ಮೇಘದೂತ್ ಆ್ಯಪ್ ನಲ್ಲಿ ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ
ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.
ಮಳೆಯ ಮಾಹಿತಿ ನೀಡಲು ಬಂದಿವೆ ಮೊಬೈಲ್ ಆ್ಯಪ್
ನೀವು ಮನೆಯಲ್ಲಿಯೇ ಮಳೆಯ ಮಾಹಿತಿ ಚೆಕ್ ಮಾಡಲು ಮೇಘದೂತ, ಮೌಸಮ್ ಆ್ಯಪ್ ಗಳು ಇವೆ. ಈ ಆ್ಯಪ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮಗೆ ಮುಂದಿನ ಐದು ದಿನಗಳ ಮಳೆಯ ಮಾಹಿತಿಯನ್ನು ಚೆಕ್ ಮಾಡಬಹುದು.
ಗುಡುಗು ಸಿಡಿಲಿನ ಮಾಹಿತಿ ನೀಡಲು ಬಂದಿವ್ ಆ್ಯಪ್ ಗಳು
ಗುಡುಗು ಸಿಡಿಲು ಬೀಳುವ ಐದು, ಹತ್ತು ನಿಮಿಷ ಮೊದಲೇ ಸಿಡಿಲಿನ ಮಾಹಿತಿ ನೀಡಲು ಸಿಡಿಲು ಹಾಗೂ ದಾಮಿನಿ ಆ್ಯಪ್ ಗಳು ಇವೆ.ಈ ಆ್ಯಪ್ ಗಳನ್ನು ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಂಡು ಸಿಡಿಲು ಬಡಿಯುವ ಐದು ನಿಮಿಷ ಮೊದಲೇ ಮಾಹಿತಿ ಪಡೆಯಬಹುದು. ಹೌದುರೈತಮಿತ್ರರೇ ರೈತರಿಗಾಗಿಯೇ ಸರ್ಕಾರವು ಹೊಸ ಹೊಸ ಆ್ಯಪ್ ಗಳನ್ನು ಅಭಿವೃದ್ಧಿಪಡಿಸಿದೆ.