Subsidy to pilgrimage: ಬೆಂಗಳೂರು, ಕಾಶಿ, ಮಾನಸ ಸರೋವರ, ಚಾರ್ಧಾಮ್, ರಾಮೇಶ್ವರ ಮತ್ತಿತರ ಯಾತ್ರೆಗಳಿಗೆ ಹೋಗುವವರಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು.
ಹೌದು, ಹೊಸ ವರ್ಷಕ್ಕೆ ಪುರಿ ಜಗನ್ನಾಥ, ದ್ವಾರಕ, ದಕ್ಷಿಣ ಭಾರತ ಕ್ಷೇತ್ರಗಳ ಯಾತ್ರೆಗೆ ತೆರಳ ಬಯಸುವ ಭಕ್ತರಿಗೆ ಮೂರು ಪ್ರವಾಸಿ ಪ್ಯಾಕೇಜ್ ಮಾಡಿರುವ ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಭಾರತ್ ಗೌರವ ಯಾತ್ರೆ ಸಹಾಯಧನ ಘೋಷಿಸಿದೆ.
Subsidy to pilgrimage ದಕ್ಷಿಣ ಭಾರತ ಯಾತ್ರೆ
ದಕ್ಷಿಣ ಯಾತ್ರೆಯ ಜನವರಿ 25 ರಿಂದ ಜನವರಿ 30 ರವರೆಗೆ ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂಗೆ 6 ದಿನ ಇರಲಿದೆ.
25 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಸರ್ಕಾರ 15 ಸಾವಿರ ಭರಿಸಲಿದ್ದು, ಯಾತ್ರಾರ್ಥಿಗಳು 10 ಸಾವಿರ ರೂಪಾಯಿ ನೀಡಬೇಕು.
ಬೆಂಗಳೂರು ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರುು, ತುಮಕೂರಿನಲ್ಲಿ ರೈಲು ಹತ್ತಿಳಿಯುವ ಅವಕಾಶವಿದೆ.
ದ್ವಾರಕಾ, ಪುರಿ ಜಗನ್ನಾಥ ಯಾತ್ರೆ
ಎರಡನೇಯದ್ದಾಗಿ ದ್ವಾರಕಾ, ನಾಗೇಶ್ವರ, ಸೋಮನಾಥ, ತ್ರಯಂಬಕೇಶ್ವರ ಅವರನ್ನೊಳಗಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಇದೆ.
ಮೂರನೇಯದಾಗಿ ಪುರಿ, ಕೋನಾರ್ಕ್, ಗಂಗಾಸಾಗರ್, ಕೋಲ್ಕತ್ತಾ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಗಳಿವೆ. ಇವರೆಡಕ್ಕೂ 32500 ರೂಪಾಯಿ ವೆಚ್ಚವಾಗಲಿದ್ದು. ಸರ್ಕಾರ 17500 ಯಾತ್ರಿಕರು ಪಾವತಿಸಬೇಕು. ದ್ವಾರಕಾ ಯಾತ್ರೆ ಜನವರಿ 3ರಂದು ಹೊರಡಲಿದ್ದು, ಫೆಬ್ರವರಿ 10 ರಂದು ಮುಗಿಯಲಿದೆ. ಬೆಂಗಳೂರು, ಎಸ್.ಎಂ.ವಿ.ಟಿ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿಯಲ್ಲಿ ಯಾತ್ರಿಗಳು ಹತ್ತಿಳಿಯಬಹುದು.
ಇದನ್ನೂಓದಿ : Free Goat training ಉಚಿತ ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ
ಧಾರ್ಮಿಕ ದತ್ತಿ ಇಲಾಖೆ ಆರಂಭಿಸಿರುವ ಕರ್ನಾಟಕ ಭಾರತ್ ಗೌರವ್ ರೈಲಿನಲ್ಲಿ ಯಾತ್ರಾರ್ಥಿಗಳಿಗೆ ಬಿಸಿ ಬಿಸಿಯಾದ ಊಟ ತಿಂಡಿಯನ್ನು ಸ್ಥಳದಲ್ಲೇ ತಯಾರಿಸಿಕೊಡುವ ವ್ಯವಸ್ಥೆಯನ್ನುಕಲ್ಪಿಸಲಾಗಿದೆ. ಹೀಗಾಗಿ ಯಾತ್ರೆಗೆ ತೆರಳುವವರಿಗೆ ಉತ್ತಮ ಸೇವೆ ನೀಡಲಾಗುವುದು. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ವ್ಯವಸ್ಥೆ ಇರುತ್ತದೆ.
ಜನವರಿ 6 ರಂದು ದ್ವಾರಕಾಯ್ತೆರ ಆರಂಭವಾಗುತ್ತಿದ್ದು, ಜನವರಿ 13 ರಂದು ಯಾತ್ರಾರ್ಥಿಗಳು ವಾಪಸ್ಸಾಗಲಿದ್ದಾರೆ. ಅದೇ ರೀತಿ ಪುರಿ, ಜಗನ್ನಾಥ ಯಾತ್ರೆಯು ಫೆಬ್ರವರಿ 3 ರಂದು ಆರಂಭವಾದರೆ ಫೆಬ್ರವರಿ 10 ರಂದು ವಾಪಸ್ಸಾಗಲಿದೆ.ಒಂದು ಬಾರಿಗೆ 600 ಜನರಿಗೆ ಯಾತ್ರೆಗಳಿಗೆ ತೆರಳಲು ಅವಕಾಶವಿದೆ.
ಪ್ರತಿ ವರ್ಷ ಸಹಸ್ರಾರು ಜನ ಯಾತ್ರೆಗೆ ತೆರಳುತ್ತಾರೆ. ಹೀಗೆ ಯಾತ್ರೆಹೋಗಿ ಬಂದವರು ನಂತರ ಇಲಾಖೆಯಿಂದ ಸಿಗುವ ಸಹಾಯಧನ ಪಡೆಯಲು ಸಾಕಷ್ಟು ಸಲ ಇಲಾಖೆಗೆ ಅಳೆದಾಡಬೇಕಿತ್ತು. ಅರ್ಜಿಯ ಸ್ಟೇಟಸ್ ತಿಳಿಯಲು ದೂರದ ಜಿಲ್ಲೆಗಳಿಂದ ಚಾಮರಾಜಪೇಟೆಯ ಪ್ರಧಾನ ಕಚೇರಿಗೆ ಭೇಟಿ ನೀಡಬೇಕಾದ ಪರಿಸ್ಥಿತಿ ಇತ್ತು. ಇನ್ನೂ ಕೆಲವರು ಯಾತ್ರೆಗೆ ಹೋಗದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿತ್ತು. ಹೀಗಾಗಿ ಅರ್ಹತೆಯುಳ್ಳವರಿಗೆ ಸಹಾಯಧನದ ವಿಳಂಬ ತಪ್ಪಿಸುವುದು, ಅರ್ಹತೆಯಿಲ್ಲದವರು ಮಾಡಿಕೊಳ್ಳುವ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದಕ ಕ್ಯೂ ಆರ್ ಕೋಡ್ ಬಳಕೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.
ಹಳ್ಳಿಗಳಲ್ಲೂ ಇನ್ನೂ ಆಸ್ತಿ ತೆರಿಗೆ ಪಾವತಿಗೆ ಆನ್ಲೈನ್ ವ್ಯವಸ್ಥೆ
ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿ ಈಗ ಸೌಲಭ್ಯ. ನಿಮ್ಮ ಸ್ಮಾರ್ಟ್ ಫೋನ್ ನಲ್ಲೇ ಗ್ರಾಮ ಪಂಚಾಯತಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ.
ರಾಜ್ಯದ ಗ್ರಾಮೀಣ ಜನರು ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ತೆರಳದೆ ಕುಳಿತಲ್ಲೇ ಮೊಬೈಲ್ ನಲ್ಲೇ ಆಸ್ತಿ ತೆರಿಗೆ ಪಾವತಿಸುವುದಕ್ಕೆ ಸರ್ಕಾರ ಅವಕಾಶ ನೀಡಿದೆ.
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಗ್ರಾಮ ಪಂಚಾಯತಿ ಆಸ್ತಿ ತೆರಿಗೆಯನ್ನು ಸ್ಮಾರ್ಟ್ ಫೋನ್ ಇದ್ರೆ ಸಾಕು, ಕುಳಿತಲ್ಲೇ ಪೇ ಮಾಡಬಹುದು. ನಿಮಗೆ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಸ್ಮಾರ್ಟ್ ಪೋನ್ ನಲ್ಲಿ ಪಾವತಿ ಬಗ್ಗೆ ಪ್ರಶ್ನೆ, ಸಮಸ್ಯೆ ಆಗುತ್ತಿದ್ದರೆ ಏಕೀಕೃತ ಸಹಾಯವಾಣಿ ಸಂಖ್ಯೆ 82775 06000 ಕರೆ ಮಾಡಿ ಪಡೆಯುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮನವಿ ಮಾಡಿದೆ.