Job direct interview : ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಬಿಇ, ಬಿಟೆಕ್ ಡಿಪ್ಲೋಮಾ ಪಾಸಾದವರಿಗೆ ಇಲ್ಲಿದೆ ಗುಡ್ ನ್ಯೂಸ್. ಕಲಬುರಗಿಯಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆದುಕೊಳ್ಳಬಹುದು.
ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಡಿಸೆಂಬರ್ 20 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜಿಲ್ಲಾ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಭಾಗವಹಿಸುವ ಕಂಪನಿಗಳ ವಿವರ ಇಂತಿದೆ
ಟ್ರಾನ್ಸ್ ಕಾನ್ ಅಟೋಮೇಶನ್ ಮತ್ತು ಕನೇಯರ್ಸ್ ಕಂಪನಿ, ಸೇಲ್ಸ್ ಇಂಜಿನಿಯರ್ ಹುದ್ದೆಗೆ ಬಿಇ, ಬಿಟೆಕ್ ಡಿಪ್ಲೋಮಾ (ಮೇಕ್ಯಾನಿಕಲ್)ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.
ಶಹಾ ಹೊಂಡೈ ಸೇಲ್ಸ್ ಮ್ಯಾನೇಜರ್, ಸೇಲ್ಸ್ ಕನ್ಸಲಟಂಟ್ , ಬಾಡಿ ಶಾಪ್ ಸರ್ವಿಸ್ ಅಡಡೈಜರ್, ಕಲಬುರಗಿಯಲ್ಲಿ ಇರುತ್ತದೆ. ಹುದ್ದೆಗಳಿಗೆ ಯಾವುದೇ ಪದವಿ ವಯೋಮಿತಿ 18 ರಿದ 35 ವಯೋಮಾನದೊಳಗಿರಬೇಕು. ಪದವಿ ಬಾಡಿ ಸರ್ವಿಸ್ ಅಡ್ವೈಸರ್ ಹುದ್ದೆಗೆ ಐಟಿಐ ಡಿಪ್ಲೋಮಾ ಪಾಸಾಗಿರಬೇಕು.
ಭಾರತ ಮೈಕ್ರೋ ಫೈನಾನ್ಸ್ ಫಿಲ್ಡ್ ಆಫೀಸರ್ ಹುದ್ದೆಗೆ ಯಾವುದೇ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಅಥವಾ ಡಿಪ್ಲೋಮಾ ಪಾಸಾಗಿರಬೇಕು. ವಯೋಮಿತಿ 18 ರಿಂದ30 ವಯೋಮಾನದೊಳಗಿರಬೇಕು.
ದಿ. ಭಾರತ್ ಎಚ್.ಆರ್. ಸಲ್ಯೂಶನ್ ದಲ್ಲಿ ಎಚ್.ಆರ್. ರಿಕ್ಯೂಟರ್ಸ್ ಹುದ್ದೆಗೆ ಯಾವುದೇ ಪದವಿ, ಎಮ್.ಬಿ.ಎ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು. ಆಪರೇಟರ್, ಕ್ವಾಲಿಟಿ ಕಂಟ್ರೋಲರ್ ಇಟಿಸಿ (ಟಾಟಾ ಇಲೆಕ್ಟ್ರಾನಿಕ್ಸ್) ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೋಮಾ ಐಟಿಐ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 26 ವಯೋಮಾನದೊಳಗಿರಬೇಕು.
ಇದನ್ನೂಓದಿ : ಉಚಿತವಾಗಿ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ
ಚೈತನ್ಯ ಫೈನಾನ್ಸ್ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಪಿಯುಸಿ, ಐಟಿಐ ಅಥವಾ ಡಿಪ್ಲೋಮಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 21 ರಿಂದ 30 ವಯೋಮಾನದೊಳಗಿರಬೇಕು. ಹಾಗೂ ಬ್ರಾಂಚ್ ಮ್ಯಾನೇಜರ್ ಹುದ್ದೆಗಳಿಗೆ ಪಿಯುಸಿ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 30 ವಯೋಮಾನದೊಳಗಿರಬೇಕು.
ಸಾಫ್ಟ್ ಸ್ಕಿಲ್ ಟ್ರೈನಿ ಹುದ್ದೆಗೆ ಯಾವುದೇ ಪದವಿಯೊಂದಿಗೆ ಸಾಫ್ಟಸಿಲ್ಕ್ ನ ಅನುಭವ ಹೊಂದಿರಬೇಕು. ಐಟಿ ಟ್ರೈನಿ ಪ್ಲೇಸಮೆಂಟ್ ಕೋ-ಆಡಿನೇಟರ್ ಹುದ್ದೆಗೆ ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 18 ರಿಂದ 25 ವಯೋಮಾನದೊಳಗಿರಬೇಕು.
ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್ ಪ್ರತಿ, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನುಹಾಗೂ ಕಚೇರಿ ದೂರವಾಣಿ ಸಂಖ್ಯೆಯನ್ನು 08472 274846, ಮೊಬೈಲ್ ನಂಬರ್ 9620095270 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Job direct interview ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಜೀವಶಾಸ್ತ್ರ ಉಪನ್ಯಾಸಕರ ಖಾಲಿ ಹುದ್ದೆಗೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಟಿಇಟಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು. ಹಾಗೂ ಅವರು ಬೋಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು. ಅರ್ಜಿ ಸಲ್ಲಿಸಲು ಇದೇ ಡಿಸೆಂಬರ್ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449906618 ಗೆ ಸಂಪರ್ಕಿಸಲು ಮೊರಾರ್ಜಿ ದೇಸಾಯಿ ಮಾದರಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಅರ್ಜುಣಗಿಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.