Pm kisan money credited

Gruhalakshmi amount credited :  ಕರ್ನಾಟಕದ ಮಹಿಳೆಯರಿಗೆ ಗುಡ್ ನ್ಯೂಸ್, ಹೌದು ಗೃಹಲಕ್ಷ್ಮೀ ಯೋಜನೆಯ 17ನೇ ಕಂತಿನ ಹಣ ಈಗಸ್ಟೇ ಜಮೆಯಾಗಿದೆ. ನಿಮ್ಮ ಖಾತೆಗೆ ಜಮೆಯಾಯಿತೋ ಇಲ್ಲವೋ ಈ ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ  ಚೆಕ್ ಮಾಡಸಬಹುದು.  ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಗೃಹಲಕ್ಷ್ಮೀ ಯೋಜನೆಯ 17ನೇ ಕಂತಿನ ಹಣ. ಹೌದು, ಇಂದು ಬೆಳಗ್ಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಯೋಜನೆಯ  17 ಕಂತಿನ ಹಣ ಜಮೆಯಾಗಿದೆ.

ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಕಂತಿನ ಹಣವೂ ಜಮೆಯಾಗುತ್ತದೆ ಎಂದುಹೇಳಲಾಗಿತ್ತು. ಆದರೆ ಒಂದೇಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಅತೀ ಶೀಘ್ರದಲ್ಲಿಉಳಿದ ಕಂತಿನ ಹಣವೂ ಜಮೆಯಾಗಲಿದೆ.  17 ಮತ್ತು 18ನೇ ಕಂತಿನ ಹಣ ಒಟ್ಟಿಗೆ ಜಮೆ ಮಾಡಲಾಗುವುದು ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಳ್ಕರ್ ತಿಳಿಸಿದ್ದರು.

ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಮಾದರಿಯಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ  ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ತಾಲೂಕು ಪಂಚಾಯತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆಗೆ ಹಣ ರವಾನೆಯಾಗುತ್ತಿದ್ದು, ಉಪ ನಿರ್ದೇಶಕರ ಮೂಲಕ ಹಣ ಹಾಕಲಾಗುವುದು ಎಂದು ಹೇಳಿದ್ದರು.

Gruhalakshmi amount credited  ಡಿಬಿಟಿ ಆ್ಯಪ್ ನಲ್ಲಿ ಸಿಗಲಿದೆ ಗೃಹಲಕ್ಷ್ಮೀ ಹಣ ಜಮೆ

ಸರ್ಕಾರದ ವಿವಿಧ ಯೋಜನೆಗಳಿಂದ ತಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ

DBT Karnataka  ಎಂದು ಟೈಪ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ಈ

https://play.google.com/store/apps/details?id=com.dbtkarnataka

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಡಿಬಿಟಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲೋ ಡಿಬಿಟಿ ಕೆಳಗಡೆ ಅಲೋ ಮೇಲೆ ಕ್ಲಿಕ್ ಮಾಡಬೇಕು.  ಮತ್ತೊಂದು ಸಲ ಅಲೋ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ ಅಲ್ಲಿ ಕೆಳಗಡೆ ಕಾಣಿಸುವ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಆಧಾರ್ ಕಾರ್ಡಿಗೆ ನೋಂದಣಿಯಾಗಿರುವ ಮೊಬೈಲ್ ನಂಬರಿಗೆ  ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನೀವು ಪಿನ್ ಕ್ರಿಯೇಟ್ ಮಾಡಿಕೊಳ್ಳಬೇಕು. ಮೇಲ್ಗಡೆ ನಮೂದಿಸಿ ಪಿನ್ ನ್ನು ಮತ್ತೇ ಕೆಳಗಡೆ ಹಾಕಬೇಕು. ಈ ಪಿನ್ ಅನ್ನು ನೀವು ನೆನಪಿಟ್ಟುಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು..ಆಗ ನಿಮ್ಮ ಫೋಟೋ ಕಾಣಿಸುತ್ತದೆ.

Gruhalakshmi amount credited ಗೃಹಲಕ್ಷ್ಮೀ ಫಲಾನುಭವಿಗಳ ಅರ್ಹತೆ

ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಯಾರು ಯಾರು ಅರ್ಹತೆ ಪಡೆದಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಲು  ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿರಬೇಕು.  ಈ ರೇಶನ್ ಕಾರ್ಡ್ ನಲ್ಲಿ  ಮಹಿಳೆಯ ಹೆಸರು ಕುಟುಂಬದ ಯಜಮಾನಿ ಎಂದು ಬರೆದಿರಬೇಕು.

ಇದನ್ನೂ ಓದಿ ನಿಮ್ಮ ಜಮೀನು ಜಂಟಿಯಾಗಿದೆಯೇ? ಇಲ್ಲೇ ಚೆಕ್ ಮಾಡಿ

ಆದಾಯ ತೆರಿಗೆ ಪಾವತಿ ಮಾಡುವವರ ಕುಟುಂಬದವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುವುದಿಲ್ಲ.  ಸರ್ಕಾರಿ ಉದ್ಯೋಗಿಗಳಿಗೆ, ಪೆನ್ಶನ್ ಪಡೆಯುವವರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಜಿಎಸ್.ಟಿ ಪಾವತಿ ಮಾಡುತ್ತಿರುವ ಮಹಿಳೆಯರಿಗೂ ಯೋಜನೆಯ ಲಾಭ ಸಿಗುವುದಿಲ್ಲ.

ನಿಮಗೆ ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ನೀವೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಎಂದು ಟೈಪ್ ಮಾಡಬೇಕು. ನಂತರ ಆ ಆಪ್  ಇನಸ್ಟಾಲ್ ಮಾಡಿ ನಿಮಗೆ ಎಸ್ಟು ಕಂತುಗಳು ಜಮೆಯಾಗಿದೆ ಎಂಬುದನ್ನುಚೆಕ್ ಮಾಡಬಹುದು.

ಡಿಬಿಟಿ ಆ್ಯಪ್ ಲಿಂಕ್ ನ್ನು ಡಿಸ್ಕ್ರಿಪಶನ್ ಬಾಕ್ಸ್ ನಲ್ಲಿ ನೀಡಲಾಗಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಬಿಟಿ ಆ್ಯಪ್ ಇನಸ್ಟಾಲ್  ಮಾಡಿಕೊಂಡು ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು.

By admin

Leave a Reply

Your email address will not be published. Required fields are marked *