Free chicken chicks distribution : 2024-25ನೇ ಸಾಲಿನ 5 ವಾರದ ಕೋಳಿ ಮರಿಗಳನ್ನು ಉತ್ಪಾದಿಸಿ ಉಚಿತವಾಗಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಪಶುಪಾಲನಾ ಇಲಾಖೆ ಉಪ ನಿರ್ದೇಶಕ (ಆಡಳಿತ) ಡಾ. ರಾಜು ದೇಶಮುಖ ಅವರು ತಿಳಿಸಿದ್ದಾರೆ.
Free chicken chicks distribution ಯಾರು ಯಾರಿಗೆ ಉಚಿತ ಕೋಳಿ ವಿತರಿಸಲಾಗುವುದು?
ಕರ್ನಾಟಕ ಸಹಕಾರ ಕುಕ್ಕಟ ಮಂಡಳಿ ನಿಯಮಿತ ವತಿಯಿಂದ 5 ವಾರದ ಕೋಳಿಮರಿಗಳನ್ನು ಉತ್ಪಾದಿಸಿ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ತಲಾ 20 ರಂತೆಕೋಳಿ ಮರಿಗಳನ್ನು ವಿತರಿಸಿ ಅವರ ಆದಾಯ ಹೆಚ್ಚಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಹಿಳಾ ರೈತರಿಂದ ಜಿಲ್ಲೆಯ ಎಲ್ಲಾ ತಾಲೂಕಿನ ಪಶು ವೈದ್ಯಾಧಿಕಾರಿಗಳು (ಆಡಳಿತ)ಅಥವಾ ಸಹಾಯಕ ನಿರ್ದೇಶಕರು ಕಚೇರಿ ಸಮಯದಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಪಶು ವೈದ್ಯ ಸಂಸ್ಥೆ ಅಥವಾ ತಾಲೂಕು ಸಹಾಯಕ ನಿರ್ದೇಶಕರು ಕಚೇರಿಗೆ ಡಿಸೆಂಬರ್ 23 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಂತೆ ಇತರ ಜಿಲ್ಲೆಗಳಿಂದಲೂ ಅರ್ಜಿ ಆಹ್ವಾನಿಸಲಾಗಿದೆ. ಹೌದು, ನೀವು ನಿಮ್ಮ ಹತ್ತಿರದ ಪಶು ಇಲಾಖೆಗೆ ಹೋಗಿ ಉಚಿತ ಕೋಳಿ ಮರಿ ವಿತರಣೆ ಕುರಿತಂತೆ ಮಾಹಿತಿ ಪಡೆಯಬಹುದು.
ಡಿಸೆಂಬರ್18 ರಂದು ಕ್ಯಾಂಪಸ್ ಸಂದರ್ಶನ
ಕಲಬುರಗಿ ಜಿಲ್ಲೆಯಲ್ಲಿ ಐಟಿಐ ಪಾಸಾದ ತರಬೇತಿದಾರರಿಗೆ ಕ್ಯಾಂಪಸ್ ಸಂದರ್ಶನ ನೀಡಲು ರಾಕ್ ಸೆರ್ಯಾಮಿಕ್ಸ್ (ಯುಎಇ) ಇವರು ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ ಜ್ಯೂನಿಯರ್ ಆಪರೇಟರ್ ಮತ್ತು ಟ್ರೈನಿ ಆಪರೇಟರ್ ಹುದ್ದೆಗಳಿಗೆ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಡಿಸೆಂಬರ್ 18 ರಂದು ಸರ್ಕಾರಿ ಐಟಿಐ ಕೈಗಾರಿಕಾ ತರಬೇತಿ ಸಂಸ್ಥೆ ಕಲಬುರಗಿ ಬೆಳಗ್ಗೆ 9 ಗಂಟೆಗೆ ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ 25 ಸಾವಿರ ರೂಪಾಯಿ ಸಂಬಂಳ ನೀಡುತ್ತಿದ್ದು, ಜೊತೆಗೆ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಹಾಗೂ ಕರ್ತವ್ಯಕ್ಕೆ ಹಾಜರಾಗಲು ಯುನೈಟೆಡ್ ಅರಬ್ ಎಮಿರೆಟ್ಸ್ ಗೆ ಹೋಗಲು ತಗಲುವ ವೆಚ್ಚ ಕಂಪನಿಯೇ ಭರಿಸಲಿದೆ.
ಇದನ್ನೂ ಓದಿ ಭಾಗ್ಯಲಕ್ಷ್ಮೀ ಹಣ ಜಮೆಯಾಗಲು ಈ ದಾಖಲೆ ಸಲ್ಲಿಸಿ
ಅಭ್ಯರ್ಥಿಗಳಿಗೆ ವಿದೇಶದಲ್ಲಿ ಕೆಲಸ ಮಾಡಲು ಸುವರ್ಣಾವಕಾಶ ಇದ್ದು, ಇಚ್ಚೆಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕಾಗಿ ಹಾಜರಾಗುವ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಭಾವಚಿತ್ರ -2 , ಆಧಾರ್ ಕಾರ್ಡ್ ಹಾಗೂ ಇತರೆ ಮೂಲ ದಾಖಲಾತಿ ಹಾಗೂ ಪ್ರತಿಗಳೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಎಂಎಸ್ಕೆ ಮಿಲ್ ರಸ್ತೆ, ಕಲಬುರಗಿಯಲ್ಲಿ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖಅಯೆ,7259272146 ಗೆ ಸಂಪರ್ಕಿಸಬೇಕುಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಟಾಪಟುಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
2024-25ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ 2023 ನೇ ಕ್ಯಾಲೆಂಡರ್ ವರ್ಷದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಂತಾರಾಷ್ಟ್ರೀಯ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕರ್ನಾಟಕದ ಕ್ರೀಡಾಪಟುಗಳು 2024ರ ಡಿಸೆಂಬರ್ 21 ರೊಳಗೆ ಅರ್ಜಿಗಳನ್ನು ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.