crop loan up to 5 lack

crop loan up to 5 lack : ರೈತರಿಗಾಗಿ ಸರ್ಕಾರ ರೈತರಿಗೆ ಒಂದಿಲ್ಲೊಂದು ಯೋಜನೆಗಳನ್ನು ಘೋಷಿಸುತ್ತಲೇ ಬಂದಿದೆ. ರೈತರಿಗೆ ಅನುಕೂಲ ಕಲ್ಪಿಸುವ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರಲ್ಲಿ ಸಾಲವನ್ನು ನೀಡಲಾಗುತ್ತಿದೆ ಹಾಗೂ ಇತರ ಉದ್ದೇಶಗಳಿಗೆ ಕಡಿಮೆ ಬಡ್ಡಿದರಲ್ಲಿ 15 ಲಕ್ಷ ರೂ.ಗಳಿಗೆ ಸಾಲವನ್ನು ಪಡೆಯಬಹುದು.

ಏನಿದು ಸಹಕಾರಿ ಕೃಷಿ ಸಾಲ ಯೋಜನೆ?

ಕರ್ನಾಟಕ ಸರ್ಕಾರವು 2023-24ನೇ ಸಾಲಿನಿಂದ ಬಡ್ಡಿರಹಿತ ಅಲ್ಪಾವಧಿ ಸಾಲವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗಳಿಗೆ ಹಾಗೂ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ಶೇ.3 ರ ಬಡ್ಡಿ ದರದಲ್ಲಿ 10 ಲಕ್ಷ ರೂ.ನಿಂದ 15 ಲಕ್ಷ ರೂ.ಗಳಿಗೆ ಏರಿಸುವ ಮಹತ್ತರ ಕ್ರಮ ತೆಗೆದುಕೊಂಡಿದೆ. ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ಶೇ.3 ರ ಬಡ್ಡಿ ದರದಲ್ಲಿ ರೂ.15.00 ಲಕ್ಷಗಳವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮಂಜೂರಾತಿ ನೀಡಿ ಆದೇಶಿಸಿದೆ.

crop loan up to 5 lack ಸಾಲ ನೀಡಲು ಸರ್ಕಾರದ ಷರತ್ತುಗಳು ಏನೇನು?

ಈ ಯೋಜನೆಯು ಗೊತ್ತುಪಡಿಸಿದ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಅಂದರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಟಿಬೇಟಿಯನ್ ಸಹಕಾರ ಸಂಸ್ಥೆಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಪಿಕಾರ್ಡ್ ಬ್ಯಾಂಕುಗಳು ರೈತರಿಗೆ ನೇರವಾಗಿ ವಿತರಿಸುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ /ಕೃಷಿ ಸಂಬಂಧಿತ ಸಾಲಗಳಿಗೆ ಅನ್ವಯಿಸುತ್ತದೆ.

ಪತ್ತಿನ ಸಹಕಾರಿ ಸಂಸ್ಥೆಗಳು ತನ್ನ ರೈತ ಸದಸ್ಯರಿಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ/ಕೃಷಿ ಸಂಬಂಧಿತ ಸಾಲಗಳನ್ನು ನಿವ್ವಳ ಶೇ.3 ರ ಬಡ್ಡಿ ದರದಲ್ಲಿ ಒದಗಿಸುವ ಯೋಜನೆಯು 15 ಲಕ್ಷ ರೂ.ಗಳವರೆಗಿನ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. ರೂ.15.00 ಲಕ್ಷಕ್ಕಿಂತ ಮೇಲ್ಪಟ್ಟ ಸಾಲಗಳಿಗೆ, ರೂ.15.00 ಲಕ್ಷಗಳ ಹೊರಬಾಕಿಗೆ ಬಡ್ಡಿ ಸಹಾಯಧನ ಅನ್ವಯವಾಗುತ್ತದೆ. ಒಬ್ಬ ಸಾಲಗಾರನಿಗೆ ವಿವಿಧ ಉದ್ದೇಶಗಳಿಗೆ ಸಾಲ ನೀಡಿದಲ್ಲಿ ಯಾವುದೇ ದಿನಾಂಕದಲ್ಲಿ ಒಟ್ಟು ಸಾಲದ ಹೊರಬಾಕಿ ರೂ.15.00 ಲಕ್ಷಗಳಿಗೆ ಮಾತ್ರ ಬಡ್ಡಿ ಸಹಾಯಧನ ಲಭ್ಯವಾಗುತ್ತದೆ.

ನಬಾರ್ಡ್ ಗುರುತಿಸಿದ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಪೈಕಿ ಲಘು ನೀರಾವರಿ, ಭೂ ಅಭಿವೃದ್ಧಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್ ಹಾಗೂ ತೋಟಗಾರಿಕೆ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಜೇನು ಸಾಕಾಣಿಕೆ ಉದ್ದೇಶಗಳಿಗೆ ರೈತರಿಗೆ ನೀಡಲಾಗುವ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಯೋಜನೆಯು ಕೊಯ್ಲು (Harvest) ವರೆಗಿನ ಮತ್ತು ಕೊಯ್ಲಿನ ನಂತರದ ಕೃಷಿ ಚಟುವಟಿಕೆಗಳಿಗೆ ಅಂದರೆ ಮಾರುಕಟ್ಟೆಗೆ ಕೃಷಿ ಉತ್ಪನ್ನ ಸಿದ್ದವಾಗುವ ಹಂತದವರೆಗೆ ಅವಶ್ಯವಿರುವ ಕೃಷಿ ಯಂತ್ರೋಪಕರಣ/ಘಟಕಗಳನ್ನು ಹೊಂದಲು ಜಮೀನು ಅಥವಾ ಜಮೀನಿನ ಸಮೀಪ ಹೊಂದಲು ನೀಡುವ ಸಾಲಗಳಿಗೂ ಸಹ ಅನ್ವಯವಾಗುತ್ತದೆ.

ಬಡ್ಡಿ ಸಹಾಯಧನವು ಒಂದು ಸಹಕಾರ ಸಂಘದಲ್ಲಿ ಪಡೆದ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ. ರೈತನ ವಾಸ ಸ್ಥಳ ಮತ್ತು ಭೂಮಿ ಒಂದೇ ಸಂಘದ ವ್ಯಾಪ್ತಿಯಲ್ಲಿದ್ದರೆ ಇತರೇ ಯಾವುದೇ ಸಂಘದ ಬೇ ಬಾಕಿ ಪತ್ರ ಪಡೆಯದೇ ಅದೇ ಸಂಘದಲ್ಲಿ ಸಾಲ ಪಡೆಯತಕ್ಕದ್ದು.

ರೈತನ ಭೂಮಿ ಮತ್ತು ವಾಸ ಸ್ಥಳ ಬೇರೆ ಬೇರೆ ಸಂಘದ ವ್ಯಾಪ್ತಿಯಲ್ಲಿದ್ದರೆ ಅಥವಾ ಎರಡು ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ, ರೈತನು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಸಂಘವು ರೈತನು ಹೊಂದಿರುವ ಒಟ್ಟಾರೆ ಭೂಮಿಯ ವಿವರವನ್ನು ಪಡೆದು, ವಾಸ ಸ್ಥಳದ ಸಂಘ ಮತ್ತು ರೈತನ ಇತರೆ ಭೂಮಿಯ ಸಂಘದಿಂದ ಬೇ ಬಾಕಿ ಪತ್ರ ಪಡೆದು ಅದೇ ಸಂಘದಲ್ಲಿ ಇತರೇ ಸಂಘದ ವ್ಯಾಪ್ತಿಯ ಭೂಮಿಗೂ ಸಹ ಸಾಲ ವಿತರಿಸಬಹುದಾಗಿದೆ.

ವಾಸ ಸ್ಥಳವನ್ನು ನಿರ್ಧರಿಸಲು ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಪರಿಗಣಿಸತಕ್ಕದ್ದು. ರೈತನು ನೆರೆ ರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದಲ್ಲಿ ಭೂಮಿ ಇದ್ದರೆ, ಅಂತಹ ರೈತನಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

ಕಸ್ಕಾರ್ಡ್ ಬ್ಯಾಂಕ್ ಮತ್ತು ಪಿಕಾರ್ಡ್ ಬ್ಯಾಂಕುಗಳು ಮೇಲಿನ ರೀತಿಯಲ್ಲಿ ಬಡ್ಡಿ ದರಗಳನ್ನು ನಿಗದಿಪಡಿಸಲು ನಿಬಂಧಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯತಕ್ಕದ್ದು.

ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಪಿಕಾರ್ಡ್ ಬ್ಯಾಂಕುಗಳು ಸಾಲ ನೀಡುವ ಬ್ಯಾಂಕಿನ ಬಂಡವಾಳ ಅಥವಾ ಸ್ವಂತ ಬಂಡವಾಳದಲ್ಲಿ ರೈತರಿಗೆ ವಿತರಿಸುವ ಎಲ್ಲಾ ಹಂತದ ಸಾಲಗಳನ್ನು ಕಡ್ಡಾಯವಾಗಿ ಡಿಸಿಸಿ ಬ್ಯಾಂಕ್ ಅಥವಾ ನಿರ್ದಿಷ್ಟ ವಾಣಿಜ್ಯ ಬ್ಯಾಂಕಿನಲ್ಲಿ ರೈತರು ಹೊಂದಿರುವ ಉಳಿತಾಯ ಖಾತೆಗಳ ಮೂಲಕವೇ ವಿತರಿಸತಕ್ಕದ್ದು.

ಉಳಿತಾಯ ಖಾತೆಗಳಿಗೆ ರೈತನ ಆಧಾ‌ರ್ ಕಾರ್ಡ್ ಲಿಂಕ್ ಮಾಡುವುದು ಮತ್ತು ರೈತನಿಂದ ಈ ಯೋಜನೆಗೆ ಆಧಾರ್ ಕಾರ್ಡ್ ಬಳಸಲು ಆಧಾರ್ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.

ಈ ಯೋಜನೆಯಡಿ ಸರ್ಕಾರದ ಬಡ್ಡಿ ಸಹಾಯಧನವು ಸಹಕಾರ ಸಂಘ/ಬ್ಯಾಂಕ್ ನಿಗದಿಪಡಿಸಿದ ಗಡುವಿನ ದಿನಾಂಕದೊಳಗೆ ಕಂತು (ಅಸಲು ಮತ್ತು ಹೊರ ಬಾಕಿ ಮೊತ್ತಕ್ಕೆ ಗಡುವಿನ ದಿನಾಂಕದವರೆಗೆ ರೈತರ ಪಾಲಿನ ಬಡ್ಡಿ) ಮರುಪಾವತಿಸಿದ್ದಲ್ಲಿ ಮಾತ್ರ ದೊರೆಯುತ್ತದೆ.

ಇದನ್ನೂ ಓದಿ ಗೃಹಲಕ್ಷ್ಮೀ ಹಣ ಮುಂದಿನ ವಾರ ಮಹಿಳೆಯರ ಖಾತೆಗೆ ಜಮೆ

ಸಾಲ ವಿತರಿಸುವಾಗ ನಿಗದಿಪಡಿಸಿದ ಕಂತುಗಳನ್ನು ನಿಬಂಧಕರ/ ಸರ್ಕಾರದ ಅನುಮತಿ ಇಲ್ಲದೇ ಮುಂದೂಡಲು ಅವಕಾಶ ಇರುವುದಿಲ್ಲ.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕಂತು ಮುಂದೂಡಲು ಸಹಕಾರ ಸಂಘಗಳು ಪ್ರಸ್ತಾವನೆ ಸಲ್ಲಿಸಬಹುದು. ಒಂದು ವೇಳೆ ಸರ್ಕಾರದ ಬಡ್ಡಿ ಸಹಾಯಧನ ಮುಂದಿನ ವರ್ಷಗಳಲ್ಲಿ ಯಾವುದೇ ಕಾರಣಕ್ಕೆ ಸ್ಥಗಿತಗೊಂಡರೆ ಸಂಬಂಧಿಸಿದ ಬಡ್ಡಿ ಪಾವತಿಸಲು ಬದ್ಧರಾಗಿರತಕ್ಕದ್ದು.

ಪ್ರಾಥಮಿಕ ಸಹಕಾರ ಸಂಘಗಳು ಮತ್ತು ಸಾಲ ಒದಗಿಸುವ ಬ್ಯಾಂಕುಗಳು ಸಾಲಕ್ಕಾಗಿ ರೈತರಿಂದ ಪಡೆಯುವ ಯೋಜನಾ ವರದಿ, ಭದ್ರತೆಯ ದಾಖಲೆಗಳು ಮತ್ತು ರೈತರ ವೈಯಕ್ತಿಕ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಸಾಲ ತೀರುವಳಿ ಆದ ನಂತರ ರೈತರಿಗೆ ತಡಮಾಡದೇ ಹಿಂದಿರುಗಿಸತಕ್ಕದ್ದು ಮತ್ತು ದೃಢೀಕರಿಸುವ ಅಧಿಕಾರಿಗಳಿಗೆ ಒದಗಿಸತಕ್ಕದ್ದು.

crop loan up to 5 lack ಸಾಲ ಪಡೆಯಲು ಯಾರೆಲ್ಲ ಅರ್ಹರು?

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿ೦ದ ಎಲ್ಲಾ ರೈತರಿಗೆ ಈ ಸಾಲ ಸಿಗುವುದಿಲ್ಲ. ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಮಾತ್ರ ಅವರಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗಲಿದೆ.

ರೈತರು ವಾಸವಿರುವ ಸ್ಥಳದ ಸಂಘ ಅಥವಾ ಜಮೀನು ಹೊಂದಿರುವ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಬೇರೆ ಕಡೆ ಸಾಲ ಪಡೆದಿರಬಾರದು.

ಎರಡು ಸಂಘಗಳ ಕಾರ್ಯ ವ್ಯಾಪ್ತಿಯಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸಸ್ಥಳ ವಿವಿಧ ಸಂಘದ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೆಯೋ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತದೆ.

ರೈತನು ವಾಸಿಸುತ್ತಿರುವ ಪ್ರದೇಶದಲ್ಲಿ ಸಂಘವು ಇಲ್ಲದಿದ್ದರೆ ಅಥವಾ ಸಾಲ ನೀಡಲು ಸಂಘವು ಸಶಕ್ತರಾಗಿಲ್ಲದಿದ್ದರೆ ಅಂತಹ ಸಂಘದಿ೦ದ ನಿರಪೇಕ್ಷಣಾ ಪತ್ರ ಪಡೆದು ಸಂಬ೦ಧಿಸಿದ ಡಿಸಿಸಿ ಬ್ಯಾಂಕುಗಳ ಶಾಖೆಗಳಲ್ಲಿ ಸಾಲ ಪಡೆಯಬಹುದು.

ರೈತ ನೆರೆ ರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದಲ್ಲಿ ಭೂಮಿ ಇದ್ದರೆ ಅಂತಹ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

ರೈತರು ಡಿಸಿಸಿ ಬ್ಯಾಂಕಿನಿ೦ದ ಸಾಲ ಪಡೆಯಬೇಕಾದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರುವುದು ಕಡ್ಡಾಯವಾಗಿದೆ.ಯಾವ

ಯಾವ ದಾಖಲೆ ಬೇಕು?

ಆಧಾರ್‌ ಕಾರ್ಡ್‌

ಪಾನ್‌ ಕಾರ್ಡ್‌

ಆರ್‌.ಟಿಸಿ (ಪಹಣಿ ದಾಖಲೆ)

ಸಾಲ ಬಾಕಿ ಇಲ್ಲದೇ ಇರುವ ಬಗ್ಗೆ ಬ್ಯಾಂಕ್‌ನಿಂದ ನಿರಾಕ್ಷೇಪಣಾ ಪತ್ರ

ಸಾಲದ ಉದ್ದೇಶದ ಕ್ರಿಯಾ ಯೋಜನೆ ವಿವರ

ಫಾರ್ಮರ್‌ ಐಡಿ (FID)

  • ಬ್ಯಾಂಕ್‌ ಖಾತೆಯ ವಿವರ
  • ಎರಡು ಪಾಸ್‌ಪೋರ್ಟ್‌ ಗಾತ್ರದ ಪೋಟೋ

 

By admin

Leave a Reply

Your email address will not be published. Required fields are marked *