Bele sala manna status

Bele sala manna status :  ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಬೆಳೆ ಸಾಲಮನ್ನಾ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಹೌದು ರೈತರ ಮಿತ್ರರೇ, 2018 ರಲ್ಲಿ 1 ಲಕ್ಷ ರೂಪಾಯಿಯವರೆಗೆ ಬೆಳೆ ಸಾಲ ಮನ್ನಾ ಘೋಷಣೆ ಮಾಡಲಾಗಿತ್ತು. ಆಗ ಕೆಲವು ರೈತರಿಗೆ ಬೆಳೆ ಸಾಲಮನ್ನಾ ಆಗಿದ್ದರೆ ಇನ್ನೂ ಕೆಲವರಿಗೆ ಆಗಿದ್ದಿಲ್ಲ. ಯಾವ ಕಾರಣಕ್ಕಾಗಿಬೆಳೆ ಸಾಲಮನ್ನಾ ಆಗಿಲ್ಲ ಆದರೆ ನಿಮಗೆಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Bele sala manna status ಬೆಳೆ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಬೆಳೆ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ರೈತರು ಈಗ ಎಲ್ಲಿಯೂ ಹೋಗಬೇಕಿಲ್ಲ. ಅಂದರೆ ಬ್ಯಾಂಕಿಗೆ ಹೋಗಬೇಕಿಲ್ಲ. ಅಲ್ಲಿ ಹೋಗಿ ನಿಮಗೆ ಬೆಳೆ ಸಾಲಮನ್ನಾ ಆಗಿದೆಯೋ ಇಲ್ಲವೋ ಇದರೊಂದಿಗೆ ನಿಮಗೆ ಎಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದು ಕೇಳುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

Bele sala manna status ಬೆಳೆ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ಈ

https://clws.karnataka.gov.in/clws/pacs/citizenreport/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Crop loan Waiver ಪೇಜ್ ಕಾಣಿಸುತ್ತದೆ. ಅಲ್ಲಿ ನಿಮಗೆ ಆಧಾರ್ ನಂಬರ್ , ರೇಸನ್ ಕಾರ್ಡ್ ನಂಬರ್ ಕಾಣಿಸುತ್ತದೆ. ಅದರಲ್ಲಿ ನೀವು ಆಧಾರ್ ಕಾರ್ಡ್ ನಂಬರ್ ನಮೂದಿಸಿ ಚೆಕ್ ಮಾಡಬಹುದು.

ಅಲ್ಲಿ Payment and Loan Status Report ಕೆಳಗಡೆ ನೀವು Enter Aadhar Nubmer ಬಾಕ್ಸ್  ನಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ Fetch Report ಮೇಲೆ ಕ್ಲಿಕ್ ಮಾಡಬೇಕು. ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ ಎಂಬುದು ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು ಕಾಣಿಸುತ್ತದೆ. ಅದರ ಮುಂದೆ ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ? ಯಾವ ಬ್ರ್ಯಾಂಚ್ ನಲ್ಲಿ ಸಾಲ ಪಡೆದಿದ್ದೀರಿ? ಇದರೊಂದಿಗೆ ನಿಮ್ಮ ಹೆಸರು ಹಾಗೂ ತಂದೆಯ ಹೆಸರು ಕಾಣಿಸುತ್ತದೆ. ನಿಮ್ಮ ರೇಶನ್ ಕಾರ್ಡ್ ವೆರಿಫೈ ಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಅದರ ಮುಂದುಗಡೆ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಕಾಣಿಸುತ್ತದೆ. ಅದರ ಮುಂದುಗಡೆ 31-12-2017 ರವರೆಗೆ ನೀವು ಎಷ್ಟು ಸಾಲ ಪಡೆದಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಸ್ಟೇಟಸ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ಎರಡೂ ವೆರಿಫೈ ಆಗಿದೆಯೇ? ಎಂಬ ಮಾಹಿತಿ ಕಾಣಿಸುತ್ತದೆ.

ನಿಮಗೆ ಎಷ್ಟು ಸಲ ಸಾಲ ಮನ್ನಾ ಹಣ ಬಿಡುಗಡೆ ಮಾಡಲಾಗಿದೆ?

ನಿಮಗೆ ಇಲ್ಲಿಯವರೆಗೆ ಎಷ್ಟುಸಲ ಸಾಲಮನ್ನಾ ಹಣ ಬಿಡುಗಡೆ ಮಾಡಲಾಗಿದೆ ಎಂ ಮಾಹಿತಿ ಕಾಣಿಸುತ್ತದೆ.ಅದರೆ ಮೊದಲು ನಿಮ್ಮ ಹೆಸರು ತಂದೆಯ ಹೆಸರು ಕಾಣಿಸುತ್ತದೆ. ಅದರ ಮುಂದುಗಡೆ ನಿಮ್ಮ ಬ್ಯಾಂಕಿನ ಹೆಸರು ಕಾಣಿಸುತ್ತದೆ.

ಇದನ್ನೂ ಓದಿ ರೈತರಿಗೆ ಬಂಪರ್ ಕೊಡುಗೆ: ಬೆಳೆ ವಿಮೆಗೆ 69 ಸಾವಿರ ಕೋಟಿ

ನಿಮಗೆ ಎಷ್ಟು ಸಾಲಮನ್ನಾ ಹಣ ಬಿಡುಗಡೆಯಾಗಿದೆ ಹಾಗೂ ಯಾವ ದಿನಾಂಕದಂದು ಬಿಡುಗಡೆಯಾಗಿದೆಎಂಬ ಮಾಹಿತಿ ನಿಮಗೆ ಕಾಣಿಸುತ್ತದೆ.

ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲಮನ್ನಾ ಆಗಬೇಕೇ?

ಪ್ರಸಕ್ತ ಸಾಲಿನಲ್ಲಿ ಬೆಳೆಸಾಲಮನ್ನಾ ಆಗಬೇಕೋ ಇಲ್ಲವೋ? ಬೆಳೆ ಸಾಲಮನ್ನಾ ಆಗಬೇಕಾದರೆ ಯಾವ ಕಾರಣಕ್ಕಾಗಿ ಆಗಬೇಕು ಆಗಬಾರದೆಂದರೆ ಯಾವ ಕಾರಣಕ್ಕಾಗಿ ಬೆಳೆ ಸಾಲಮನ್ನಾ ಆಗಬಾರದು ಎಂ

By admin

Leave a Reply

Your email address will not be published. Required fields are marked *