Bele parihara jama

Bele parihara jama:  ಬೆಳೆ ಹಾನಿ ಪರಿಹಾರ ಯಾವ ಯಾವ ರೈತರಿಗೆ ಜಮೆಯಾಗಿದೆ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಮುಂಗಾರು ಹಂಗಾಮಿಗೆ ಸುರಿದ ಅಪಾರ ಮಳೆಯಿಂದ ಬಹಳ ರೈತರ ಬೆಳೆ ಹಾನಿಯಾಗಿದೆ. ಕೆಲವು ರೈತರು ಮುಂಗಾರು ಹಂಗಾಮಿಗೆ ವಿಮೆ ಮಾಡಿಸಿದರೆ ಇನ್ನೂ ಕೆಲವರು ಬೆಳೆ ವಿಮೆ ಮಾಡಿಸಿಲ್ಲ. ಆದರೆ ಬೆಳೆ ವಿಮೆ ಬಿಟ್ಟರೆ ಬೆಳೆ ಹಾನಿಯಾದ ಎಲ್ಲಾ ರೈತರಿಗೆ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಈಗಾಗಲೇ ಕೃಷಿ ಸಚಿವರು ತಿಳಿಸಿದ್ದಾರೆ.

Bele parihara jama:  ಬೆಳೆ ಹಾನಿ ಪರಿಹಾರ ನಿಮಗೆಷ್ಟು ಜಮೆಯಾಗಿದೆ? ಹೀಗೆ ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ  ಬೆಳೆ ಹಾನಿ ಪರಿಹಾರ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ರೈತರು  ಚೆಕ್ ಮಾಡಬಹುದು. ಹೌದು, ಕೇವಲ ಒಂದೇ ನಿಮಿಷದಲ್ಲಿ ರೈತರು ಚೆಕ್ ಮಾಡಬಹುದು.

ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಲು ಈ

https://parihara.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ಪರಿಹಾರ ಹಣ ಸಂದಾಯ ವರದಿ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು.  Select Calamity Type ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ನಂತರ   Select Year Type 2023-24 ಆಯ್ಕೆಮಾಡಿಕೊಳ್ಳಬೇಕು. Enter Valid 12 Digit Aadhar ನಲ್ಲಿ ನಿಮ್ಮ ಆಧಾರ್ ನಂಬರ್ ಹಾಕಬೇಕು. ನಂತರ  Enter Captcha  ನಲ್ಲಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು.  ನಂತರ ವಿವರಗಳನ್ನು ಪಡೆಯಲು / Fetch Details ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಯಾವ ಬ್ಯಾಂಕಿಗೆ ಎಷ್ಟು ಹಣ ಜಮಯಾಗಿದೆ.ಯಾವ ದಿನಾಂಕದಂದು ಹಣ ಜಮೆಯಾಗಿದೆ.

ಇದನ್ನೂ ಓದಿ Varunamitra number ಮಳೆ ಯಾವಾಗ ಬರುತ್ತದೆ? ಈ ನಂಬರಿಗೆ ಕರೆ ಮಾಡಿ

ಒಂದು ವೇಳೆ ಬರ ಪರಿಹಾರ ಜಮೆಯಾಗಿಲ್ಲವಾದರೆ ನಿಮಗೆ ಹಣ ಸಂದಾಯವಾಗಿಲ್ಲ Payment not Made ಎಂಬ ಸಂದೇಶ ಕಾಣಿಸುತ್ತದೆ.

ಬೆಳೆ ಹಾನಿ ಪರಿಹಾರ ಹೇಗೆ ನಿರ್ಧರಿಸಲಾಗುತ್ತದೆ?

ಸಾಮಾನ್ಯವಾಗಿ ಬೆಳೆ ಹಾನಿ ಪರಿಹಾರ ನಿಗದೆ  ಹೇಗೆ ಮಾಡುತ್ತಾರೆಂದರೆ ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ (ಗರಿಷ್ಠ ಎರಡು ಹೆಕ್ಟೇರ್ ಗೆ) ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಮಳೆಯಾಶ್ರಿತ / ಖುಷ್ಕಿ ಬೆಳೆಗೆ 8500 ರೂಪಾಯಿ ನಿಗದಿಪಡಿಸಲಾಗಿದೆ. ನೀರಾವರಿ ಬೆಳೆಗೆ 17000 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೂ ಬಹುವಾರ್ಷಿಕ /  ತೋಟಗಾರಿಕೆ ಬೆಳೆಗಳಿಗೆ 22500 ರೂಪಾಯಿವರೆಗೆ ಪರಿಹಾರ ನೀಡಲು ನಿಗದಿಪಡಿಸಲಾಗಿದೆ. ಇದು ಪ್ರತಿ ವರ್ಷ ಇಂತಿಷ್ಟೇ ಇರುತ್ತದೆ ಎಂದು ಹೇಳಕ್ಕಾಗುವುದಿಲ್ಲ.ಬೆಳೆ ಹಾನಿಯನ್ನು ಪರಿಶೀಲಿಸಿದ ನಂತರ ಸರ್ಕಾರವು ಪರಿಹಾರ ನಿಗದಿಪಡಿಸುತ್ತದೆ.

ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.?

ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ಸಹ ತಮ್ಮ ಮೊಬೈಲ್ ನಲ್ಲಿ ವಿಮೆ ಸ್ಟೇಟಸ್ ಚೆಕ್ ಮಾಡಬಹುದು.

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕ್ರಾಪ್ ಇನ್ಸುರೆನ್ಸ್ ಸ್ಟೇಟಸ್ ಚೆಕ್ ಮಾಡುವ ಪೇಜ್ ಕಾಣಿಸುತ್ತದೆ.

ಉದಾಹರಣೆಗೆ 2023-24ನೇ ಸಾಲಿನ  ಮುಂಗಾರು ಹಂಗಾಮಿನ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದಿದ್ದರೆ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.  Farmers ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊದು ಪೇಜ್ ತೆರೆದುಕೊಳ್ಳುತ್ತದೆ.

ನೀವು ಮೊಬೈಲ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡತ್ತೀರೆಂದರೆ  ಇಲ್ಲಿ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಬೇಕು..  ನಂತರ Search ಬಟನ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

By admin

Leave a Reply

Your email address will not be published. Required fields are marked *