Bele hani parihara jama

Bele hani parihara jama:  ರಾಜ್ಯದಲ್ಲಿ ಹಿಂಗಾರು ಮಳೆ ಅವಧಿಯಲ್ಲಿ 1.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಅವಗಳಿಗೆ ಸಂಬಂದಿಸಿದಂತೆ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಒಂದು ವಾರದಲ್ಲಿ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಅವರು ವಿಕಾಸ ಸೌಧದಲ್ಲಿ ಮಾತನಾಡಿ, ಹಿಂಗಾರು ಮಳೆಯಿಂದ ಅಂದಾಜು 120 ಕೋಟಿ ರೂಪಾಯಿಯವರೆಗೆ ನಷ್ಟ ಉಂಟಾಗಿದೆ. ರೈತರಿಗೆ ಪರಿಹಾರ ನೀಡುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

Bele hani parihara jama:  ಬೆಳೆ ಹಾನಿ ಪರಿಹಾರ ನಿಮಗೆಷ್ಟು ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ  ಪರಿಹಾರ ಸ್ಟೇಟಸ್ ಚೆಕ್ ಮಾಡಲು ಈ

https://parihara.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮಗೆ ಪರಿಹಾರ ಹಣ ಸಂದಾಯ ವರದಿ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು.  Select Calamity Type ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ನಂತರ   Select Year Type 2023-24 ಆಯ್ಕೆಮಾಡಿಕೊಳ್ಳಬೇಕು. Enter Valid 12 Digit Aadhar ನಲ್ಲಿ ನಿಮ್ಮ ಆಧಾರ್ ನಂಬರ್ ಹಾಕಬೇಕು. ನಂತರ  Enter Captcha  ನಲ್ಲಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು.  ನಂತರ ವಿವರಗಳನ್ನು ಪಡೆಯಲು / Fetch Details ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಯಾವ ಬ್ಯಾಂಕಿಗೆ ಎಷ್ಟು ಹಣ ಜಮಯಾಗಿದೆ.ಯಾವ ದಿನಾಂಕದಂದು ಹಣ ಜಮೆಯಾಗಿದೆ.

ಇದನ್ನೂ ಓದಿ :

ಒಂದು ವೇಳೆ ಬರ ಪರಿಹಾರ ಜಮೆಯಾಗಿಲ್ಲವಾದರೆ ನಿಮಗೆ ಹಣ ಸಂದಾಯವಾಗಿಲ್ಲ Payment not Made ಎಂಬ ಸಂದೇಶ ಕಾಣಿಸುತ್ತದೆ.

ಬೆಳೆ ಹಾನಿ ಪರಿಹಾರ ಹೇಗೆ ನಿರ್ಧರಿಸಲಾಗುತ್ತದೆ?

ಸಾಮಾನ್ಯವಾಗಿ ಬೆಳೆ ಹಾನಿ ಪರಿಹಾರ ನಿಗದೆ  ಹೇಗೆ ಮಾಡುತ್ತಾರೆಂದರೆ ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ (ಗರಿಷ್ಠ ಎರಡು ಹೆಕ್ಟೇರ್ ಗೆ) ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಮಳೆಯಾಶ್ರಿತ / ಖುಷ್ಕಿ ಬೆಳೆಗೆ 8500 ರೂಪಾಯಿ ನಿಗದಿಪಡಿಸಲಾಗಿದೆ. ನೀರಾವರಿ ಬೆಳೆಗೆ 17000 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೂ ಬಹುವಾರ್ಷಿಕ /  ತೋಟಗಾರಿಕೆ ಬೆಳೆಗಳಿಗೆ 22500 ರೂಪಾಯಿವರೆಗೆ ಪರಿಹಾರ ನೀಡಲು ನಿಗದಿಪಡಿಸಲಾಗಿದೆ. ಇದು ಪ್ರತಿ ವರ್ಷ ಇಂತಿಷ್ಟೇ ಇರುತ್ತದೆ ಎಂದು ಹೇಳಕ್ಕಾಗುವುದಿಲ್ಲ.ಬೆಳೆ ಹಾನಿಯನ್ನು ಪರಿಶೀಲಿಸಿದ ನಂತರ ಸರ್ಕಾರವು ಪರಿಹಾರ ನಿಗದಿಪಡಿಸುತ್ತದೆ.

ಅತೀ ಶೀಘ್ರದಲ್ಲಿ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ಯಾವ ರೈತರ ಬೆಳೆ ಹಾಳಾಗಿದೆಯೋ ಅವರ ಖಾತೆಗೆ ಹಣ ಜಮೆಯಾಾಗಲಿದೆ. ಒಮ್ಮೆ ನಿಮ್ಮ ಖಾತೆ ಬ್ಯಾಲೆನ್ಸ್ ಚೆಕ್ ಮಾಾಾ ನೋಡಿ

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

ಕಂದಾಯ ಇಲಾಖೆಯಲ್ಲಿ ಖಾಲಿಯಿರುವ 34 ಭೂ ದಾಖಲೆಯ ಸಹಾಯಕ ನಿರ್ದೇಶಕ ಹಾಗೂ 746 ಸರ್ಕಾರಿ ಸರ್ವೆಯರ್ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಜತೆಗೆ 1191 ಪರವಾನಗಿ ಹೊಂದಿದ ಸರ್ವೆಯರ್ ಗಳನ್ನು  ಹೊರಗುತ್ತಿಗೆ ಆಧಾರದಲ್ಲಿನೇಮಕ ಮಾಡಿಕೊಳ್ಳಲಾಗಿದ್ದು, ಇನ್ನೂ ಒಂದು ಸಾವಿರ ಪರವಾನಗಿ ಸರ್ವೆಯರ್ ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

 

By admin

Leave a Reply

Your email address will not be published. Required fields are marked *