Anganawadi job

Anganawadi jobs : ತುಮಕೂರು ಜಿಲ್ಲೆಯ ಮಧುಗಿರಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ 19 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದ ಅರ್ಜಿಗಳಲ್ಲಿಅಪೂರ್ಣಗೊಂಡಿರುವ ಅರ್ಜಿಗಳನ್ನು ಮತ್ತೊಮ್ಮೆ ಸಲ್ಲಿಸಲು ಅಭ್ಯರ್ಥಿಗಳಿಗೆ ಅಕವಾಶ ನೀಡಲಾಗಿದೆ ಎಂದು ಮಧುಗಿರಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್ಲೈನ್ ಮುಖಾಂತರ ಸಹಾಯಕಿಯರ ಹುದ್ದೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 148 ಅರ್ಜಿಗಳು ಅಪೂರ್ಣಗೊಂಡಿರುತ್ತವೆ. ಅಪೂರ್ಣ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು ಮರು ಅರ್ಜಿ ಸಲ್ಲಿಸಲು ಜನವರಿ 5 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಯಾ ಮುಧುಗಿರಿ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ತಾಲೂಕು ಪಂಚಾಯತಿ ಆವರಣ, ಶಿರಾಗೇಟ್, ಮಧುಗಿರಿ ಅಥವಾ ದೂರವಾಣಿ ಸಂಖ್ಯೆ 08137200002 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Anganawadi jobs ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಾಗ ಅಪೂರ್ಣಗೊಂಡವರು ಮತ್ತೇ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹೌದು, ಕಲಬುರಗಿ ಜಿಲ್ಲೆಯ ಆಫಜಲ್ಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಕಲಬುರಗಿ ಗ್ರಾಮಾಂತರ, ಕಲಬುರಗಿ ನಗರ, ಜೇವರ್ಗಿ ಸೇಡಂ ಹಾಗೂ ಶಹಾಬಾದ್ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ ಒಟ್ಟು 61 ಅಂಗನವಾಡಿ ಕಾರ್ಯಕರ್ತೆ ಹಾಗೂ 238 ಅಂಗನವಾಡಿ ಸಹಾಕಿಯರ ಗೌರವ ಸೇವೆ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ವೆಬ್ ಸೈಟ್ ದಲ್ಲಿ ಒಟ್ಟು 4 ವಿವಿಧ ಹಂತಗಳಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ ಇದರಲ್ಲಿ ಕೆಲವರಿಗೆ 1ನೇ ಹಂತದಲ್ಲಿಯೇ ಅಪ್ಲಿಕೇಶನ್ ಸಕ್ಸೆಸಫುಲಿ ಅಪ್ಲೋಡೆಡ್ ಎಂಬ ಮೆಸೇಜ್ ಅವರ ಮೊಬೈಲಿಗೆ ಸ್ವೀಕೃತವಾಗಿರುವುದರಿಂದ ಅರ್ಜಿಗಳನ್ನು ಪೂರ್ಣಗೊಳಿಸಿರುವುದಿಲ್ಲಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಈ ನಾಲ್ಕು ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣವಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ವೆಬ್ ಸಟ್ ದಲ್ಲಿ ತಮ್ಮ ಅರ್ಜಿಗಳನ್ನು ಪೂರ್ಣಗೊಳಿಸಲು ಇಲಾಖೆಯ ವತಿಯಿಂದಲೇ ಡಿಸೆಂಬರ್ 26 ರಿಂದ ಜನವರಿಗೆ 5 ರವರೆಗೆ ಸಂಜೆ 5.30 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ Rabi crop survey ಮೊಬೈಲ್ ನಲ್ಲಿ ಹೀಗೆ ಬೆಳೆ ಸಮೀಕ್ಷೆ ಮಾಡಿ

ಅಭ್ಯರ್ಥಿಗಳು ಒಂದನೇ ಹಂತದಲ್ಲಿ ಆನ್ಲೈನ್ ತಂತ್ರಾಂಶದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬಬೇಕು. ಎರಡನೇ ಹಂತದಲ್ಲಿತಮ್ಮ ಭಾವಚಿತ್ರ ಸಹಿಯನ್ನು ಅಪ್ಲೋಡ್ ಮಾಡಬೇಕು. ಮೂರನೇ ಹಂತ ತಮ್ಮ ದಾಖಲಾತಿಗಳನ್ನು ಅಪ್ವೋಡ್ ಮಾಡಬೇಕು. ನಾಲ್ಕನೇ ಹಂತದಲ್ಲಿ ತಮ್ಮ ಆಧಾರ್ ಸಂಖ್ಯೆ ನಮೂದಿಸಿ ಇ ಹಸ್ತಾಕ್ಷರದೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ 2342 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 3442 ಸಹಾಯಕಿಯರ ಹುದ್ದೆಗಳಿಗೆ ಅಪೂರ್ಣ ಅರ್ಜಿಗಳು ಸ್ವೀಕೃತವಾಗಿರುತ್ತದೆ.

ಮೇಲ್ಕಂಡ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ  ಗೌರವಧನ ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ದಿನಾಂಕ 5-7-2024 ರಂದು ಅಧಿಸೂಚನೆ ಹೊರಡಿಸಿ, ದಿನಾಂಕ 7-7-20254 ರಿಂದ 7-802024 ರವರೆಗೆ ಹಾಗೂ 14-8-2024ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ  ವಿಸ್ತರಿಸಲಾಗಿತ್ತು. ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿರುತ್ತದೆ.

ಅಪೂರ್ಣವಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೇಲ್ಕಂಡ ನಿಗದಿಪಡಿಸಿರುವ ದಿನಾಂಕದೊಳಗಾಗಿ ಅರ್ಜಿಗಳನ್ನು ಪೂರ್ಣಗೊಳಿಸದಿದ್ದಲ್ಲಿ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಅಪೂರ್ಣವಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮಾಹಿತಿಯುಳ್ಳ ಪಟ್ಟಿಯನ್ನು ಅಂಗನವಾಡಿ ಕೇಂದ್ರವಾರು ಲಗತ್ತಿಸಲಾಗಿದೆ. ಅಪ್ರೂಣವಾಗಿರುವ ಅರ್ಜಿಗಳನ್ನುಕೊನೆಯ ದಿನಾಂಕದೊಳಗೆಅರ್ಜಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ https://karnemakaone.kar.nic.in/abcd ಲಿಂಕ್ ಮೇಲೆ  ಕ್ಲಿಕ್ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ 08475273308ಗೆ ಸಂಪರ್ಕಿಸಲು ಕೋರಲಾಗಿದೆ.

By admin

Leave a Reply

Your email address will not be published. Required fields are marked *