Aadhaar seeding for pm kisan

Aadhaar seeding for pm kisan : ಆಧಾರ್ ಸೀಡಿಂಗ್ ಮಾಡಿದರೆ ಮಾತ್ರ ಇನ್ನೂ ರೈತರ ಖಾತೆಗೆ ಸಬ್ಸಿಡಿ, ಬರಗಾಲ ಪರಿಹಾರ, ಬೆಳೆ ವಿಮೆಪರಿಹಾರ ಹಾಗೂ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಆದಾರ್ ಸೀಡಿಂಗ್ ಮಾಡಿದರೆ ಎಲ್ಲಿ ಮಾಡಿಸಬೇಕು? ಹೇಗೆ ಮಾಡಿಸಬೇಕು?  ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Aadhaar seeding for pm kisan ಆಧಾರ್ ಸೀಡಿಂಗ್ ಮಾಡಿಸುವ ಮುನ್ನ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಮಂದಿನ ಕಂತು ನಿಮಗೆ ಜಮೆಯಾಗುವ ಮುನ್ನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದು ಕೊಳ್ಳುತ್ತದೆ.  ಅಲ್ಲಿ ನೀವು  ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ಅಲ್ಲಿ ನಿಮ್ಮ ಹೆಸರು ನೀವು ಚೆಕ್ ಮಾಡಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಗೆ ಅರ್ಹತೆಯೊಂದಿಗೆ ಎಲ್ಲಾ ದಾಖಲೆಯಲ್ಲಿ ಹೆಸರು ಒಂದೇ ರೀತಿಯಾಗಿರಬೇಕು

ರೈತರ ಹೆಸರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್ ಹಾಗೂ  ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ರೀತಿಯಾಗಿರಬೇಕು. ಹೆಸರು  ಸ್ವಲ್ಪ ವ್ಯತ್ಯಾಸವಾಗಿದ್ದರೂ ಸಹ ಮುಂದಿನ 19ನೇ ಕಂತು ರೈತರಿಗೆ ಎಲ್ಲಾ ಅರ್ಹತೆಯಿದ್ದರೂ ಸಹ ಜಮೆಯಾಗುವುದಿಲ್ಲ. .

ಪಿಎಂ ಕಿಸಾನ್ ರೈತರ ಇಕೆವೈಸಿ ಕಡ್ಡಾಯವಾಗಿ ಆಗಿರಬೇಕು?

ಪಿಎಂ ಕಿಸಾನ್ ಯೋಜನೆಯ 19ನೇ ಕಂತು ಪಡೆಯಲು ರೈತರು ಇಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು. ಇಲ್ಲದಿದ್ದರೆ ಅಂತಹ ರೈತರಿಗೆ ಹಣ ಜಮೆಯಾಗುವುದಿಲ್ಲ. ನಿಮ್ಮದು ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಆಧಾರ್ ಸೀಡಿಂಗ್ ಹೇಗೆ ಮಾಡಿಸಬೇಕು?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾದ ನಿಮ್ಮ ಬ್ಯಾಂಕ್ ಅಕೌಂಟ್ ವಿವಿಧ ಶಾಖೆಗಳಲ್ಲಿದ್ದರೆ ನಿಮಗೆ ಯಾವ ಬ್ಯಾಂಕ್ ಖಾತೆಗೆ ನಿಮಗೆ ಪಿಎಂಕಿಸಾನ್ ಹಣ ಜಮೆಯಾಗುತ್ತಿದೆಯೋ ಅದೇ ಬ್ಯಾಂಕಿಗೆ ಹೋಗಬೇಕು.

ಇದನ್ನೂ ಓದಿ Tadpatri Subsidy ಸಬ್ಸಿಡಿಯಲ್ಲಿ ತಾಡಪತ್ರಿ ನೀಡಲು ಅರ್ಜಿ ಆಹ್ವಾನ

ಅಲ್ಲಿ ನೀವು ಬ್ಯಾಂಕ್ ಸಿಬ್ಬಂದಿಯ ಬಳಿ ಆಧಾರ್ ಸೀಡ್ ಅರ್ಜಿ ಪಡೆದುಕೊಳ್ಳಬೇಕು. ನಂತರ ಅಲ್ಲಿಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಬಯೋಮೆಟ್ರಿಕ್ ಆಧಾರ್ ಸೀಡಿಂಗ್ ಮಾಡಿಸಬೇಕು. ನಂತರ ನಿಮಗೆ ಪೆಂಡಿಂಗ್ ಹಣವೂ ಜಮೆಯಾಗುವ ಸಾಧ್ಯತೆಯಿದೆ.

ಪಿಎಂ ಕಿಸಾನ್ ಮುಂದಿನ ಕಂತು ಯಾವಾಗ ಜಮೆಯಾಗಲಿದೆ?

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಫೆಬ್ರವರಿ ತಿಂಗಳಲ್ಲಿ ಜಮೆಯಾಗಲಿದೆ. ಹೌದು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಜಮೆಯಾಗಿತ್ತು. ಹಾಗಾಗಿ ನಿಮಗೆ 19 ನೇ ಕಂತಿನ ಹಣ ಫೆಬ್ರವರಿ ತಿಂಗಳಲ್ಲಿ ಜಮೆಯಾಗಲಿದೆ. ಹಾಗಾಗಿ ನೀವು ನಿಮ್ಮ ಆಧಾರ್ ಸೀಡ್ ಮಾಡಿಸಿಕೊಂಡರೆ ಮಾತ್ರ  ನಿಮಗೆ ಪಿಎಂ ಕಿಸಾನ್ ಯೋಜನೆಯ  ಹಿಂದಿನ ಯಾವ ಯಾವ ಕಂತು ಜಮೆಯಾಗಿಲ್ಲವೋ ಆ ಎಲ್ಲಾಕಂತುಗಳು ಜಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ಇನ್ನೇಕೆ ತಡ ಕೂಡಲೇ ನಿಮ್ಮ ಹತ್ತಿರದ ನಿಮ್ಮ ಬ್ಯಾಂಕ್ ಶಾಖೆಗೆ ತೆರಳಿ ಆಧಾರ್ ಸೀಡ್ ಮಾಡಿಸಿಕೊಳ್ಳಬಹುದು.

 

By admin

Leave a Reply

Your email address will not be published. Required fields are marked *