Agniveer vayu job notification : ಭಾರತೀಯ ವಾಯು ಸೇನೆಯಲ್ಲಿ ಅಗ್ನಿಪಥ ಯೋಜನೆಯಡಿ ಅಗ್ನಿವೀರ ವಾಯು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕಲಬುರಗಿ ಜಿಲ್ಲೆಯ ಹಾಗೂ ರಾಜ್ಯದ ವಯೋಮಿತಿ 17.5-21 ವರ್ಷದೊಳಗಿನ ಅಭ್ಯರ್ಥಿಗಳು 2025ರ ಜನವರಿ 27 ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅಗ್ನಿವೀರವಾಯು ಹುದ್ದೆಗೆ ಪಿಯುಸಿ (ಪಿಯುಸಿಯಲ್ಲಿ ಪ್ರತಿಶತ ಶೇ. 50 ಹಾಗೂ ಆಂಗ್ಲ ಭಾಷೆಯಲ್ಲಿ ಪ್ರತಿಶತ 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು) ಪಾಸಾಗಿರಬೇಕು. ಅಗ್ನಿವೀರವಾಯು ಹುದ್ದೆಗೆ ಡಿಪ್ಲೋಮಾ (ಡಿಪ್ಲೋಮಾದಲ್ಲಿ ಪ್ರತಿಶತ 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು) ಪಾಸಾಗಿರಬೇಕು.
Agniveer vayu job notification ವಯಸ್ಸಿನ ಅರ್ಹತೆ
ಈ ಹುದ್ದೆಗಳಿಗೆ ರಿಜಿಸ್ಟ್ರೇಶನ್ ಪಡೆಯಲು ಬಯಸುವ ಅವಿವಾಹಿತ ಪುರು ಷ ಮಹಿಳೆಯರು ಜನವರಿ 2005 ಮತ್ತು 1 ಜುಲೈ 2008 ರ ನಡುವೆ ಜನಿಸಿರಬೇಕು.
Agniveer vayu job notification ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
10ನೇ ತರಗತಿ ಅಂಕಪಟ್ಟಿ
12ನೇ ತರಗತಿ ವಿಜ್ಞಾನ ವಿಭಾಗ ಅಥವಾ ತತ್ಸಮಾನ ವಿದ್ಯಾರ್ಹತೆ ದಾಖಲೆ ಹೊಂದಿರಬೇಕು. 2 ವರ್ಷದ ವೃತ್ತಿಪರ ಕೋರ್ಸ್ ಪಾಸ್ ಮಾಡಿದ ಸರ್ಟಿಫಿಕೇಟ್ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹೊಂದಿರಬೇಕು. ಅಭ್ಯರ್ಥಿಯ ಸಹಿ ಸ್ಕ್ಯಾನ್ ಕಾಪಿ ಹೊಂದಿರಬೇಕು. ಅಭ್ಯರ್ಥಿ ಎಡಗೈ ಹೆಬ್ಬೆರಳು ಥಂಬ್ ಇಂಪ್ರೆಶನ್ ಸ್ಕ್ಯಾನ್ ಕಾಪಿ ಹಾಗೂ ಪೋಷಕರ ಸಹಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು 250 ಶುಲ್ಕ ವಿರುತ್ತದೆ. ಅರ್ಜಿ ಶುಲ್ಕವನ್ನು ಡೆಬಿಟ್ ಅಥವಾ ಕ್ರೇಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು https://agnipathvayu.cdac.in/AV/
ವೆಬ್‌ಸೈಟ್‌ದಲ್ಲಿ 2025ರ ಜನವರಿ 27 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ವಾಯುಪಡೆ ಅಗ್ನಿವೀರರ ವೇತನ ಭತ್ಯೆ
ಮೊದಲನೇ ವರ್ಷ 30 ಸಾವಿರ ರೂಪಾಯಿ ಜೊತೆಗೆ ಇತರ ಭತ್ಯೆ ಇರುತ್ತದೆ.
ಎರಡನೇ ವರ್ಷ 33 ಸಾವಿರ ರೂಪಾಯಿ ಹಾಗೂ ಇತರ ಭತ್ಯೆ ಇರುತ್ತದೆ. ಮೂರನೇ ವರ್ಷ 36 ಸಾವಿರ 500 ರೂಪಾಯಿಹಾಗೂ ಇತರ ಭತ್ಯೆ ಇರುತ್ತದೆ. ನಾಲ್ಕನೇ ವರ್ಷ 40 ಸಾವಿರ ರೂಪಾಯಿ ಹಾಗೂ ಇತರ ಭತ್ಯೆ ಇಱುತ್ತದೆ.
ಅಗ್ನಿವೀರ್ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾವಧಿ ಪ್ಯಾಕೇಜ್ 10 ಲಕ್ಷ ರೂಪಾಯಿ ನೀಲಾಗುವುದು.
ಹೆಚ್ಚಿನ ಮಾಹಿತಿಗಾಗಿ https://agnipathvayu.cdac.in/AV/
ಹಾಗೂ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.
6ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಶ್ರೀಮತಿ ಇಂದಿರಾಗಾಂಧಿ, ಡಾ. ಬಿ.ಆರ್‌ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 2025-26ನೇ ಸಾಲಿಗೆ 6ನೇ ತರಗತಿಯ ಪ್ರವೇಶಕ್ಕೆ ಪಡೆಯಲು 5ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂಓದಿ : ಆಧಾರ್ ಸೀಡಿಂಗ್ ಮಾಡಿದರೆ ಮಾತ್ರ ಪಿಎಂ ಕಿಸಾನ್ ಹಣ ಜಮೆ
ಆಸಕ್ತಿಯುಳ್ಳ ಪೋಷಕರು ತಮ್ಮ ಸಮೀಪದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಶ್ರೀಮತಿ ಇಂದಿರಾಗಾಂಧಿ, ಡಾ. ಬಿ.ಆರ್‌ಅಂಬೇಡ್ಕರ್ ವಸತಿ ಶಾಲೆಗಳ ಪ್ರಾಂಶುಪಾಲರಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ 2025ರ ಜನವರಿ 25 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ/ಹಿಂದುಳಿದ ವರ್ಗದ ಪ್ರವರ್ಗ-1/ಹಿಂದುಳಿದ ವರ್ಗ 2ಎ, 2ಬಿ, 3ಎ, 3ಬಿ/ ವಿಶೇಷ ವರ್ಗ (ಅಂಗವಿಕಲ/ದೇವದಾಸಿ ಮಕ್ಕಳು/ವಿಧವಾ ಮಕ್ಕಳು/ಅನಾಥ ಮಕ್ಕಳು/ಸಫಾಯಿ ಕರ್ಮಚಾರಿಗಳ ಮಕ್ಕಳು ಇತ್ಯಾದಿ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯೊಂದಿಗೆ ಸಲ್ಲಿಸಬೇಕಾದ ಪ್ರಮಾಣಪತ್ರಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯಾ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಡೆಯಲು ಕೋರಲಾಗಿದೆ.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮೊರಾರ್ಜಿದೇಸಾಯಿ/ ಕಿತ್ತೂರು ರಾಣಿಚೆನ್ನಮ್ಮ/ ಶ್ರೀಮತಿ ಇಂದಿ ರಾಗಾಂಧಿ/ ಡಾ. ಬಿ.ಆರ್‌ಅಂಬೇಡ್ಕರ್ ವಸತಿ ಶಾಲೆಗಳ ಪ್ರಾಂಶುಪಾಲರನ್ನು ಸಂಪರ್ಕಿಸಲು ಕೋರಲಾಗಿದೆ.