Tadpatri Subsidy : ರೈತರ ಅನಕೂಲವಾಗುವ ತಾಡಪಾತ್ರಿ (ತಾಡಪಾಲ) ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಹೌದು, ಸಬ್ಸಿಡಿಯಲ್ಲಿ ರೈತರಿಗೆ ತಾಡಪತ್ರಿ ವಿತರಿಸಲಾಗುವುದು. ಎಂದು ರೈತ ಸಂಪರ್ಕ ಕೇಂದ್ರ ಮುಧೋಳ ಕೃಷಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಸಹಾಯಧನದಲ್ಲಿ ತಾಡಪತ್ರಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ವ್ಯಾಪ್ತಿಯಲ್ಲಿ ಬರುವ ರೈತರು ಅರ್ಜಿ ಆಹ್ವಾನಿಸಲಾಗಿದೆ.
ಕೆಳಗಡೆ ನೀಡಲಾದ ದಿನಾಂಕದೊಳಗೆ ಆಯಾ ಗ್ರಾಮದ ರೈತರು ಅರ್ಜಿ ಸಲ್ಲಿಸಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಅರ್ಹ ಫಲಾನುಭವಿಗಳಿಗೆ ಮಾತ್ರ ತಾಡಪತ್ರಿ ವಿತರಿಸಲಾಗುವುದು.
Tadpatri Subsidy ತಾಡಪತ್ರಿ ಪಡೆಯಲು ಯಾವ ಯಾವ ದಾಖಲೆ ಬೇಕು?
ತಾಡಪತ್ರಿ ಸಹಾಯಧನದಲ್ಲಿ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಮೀನಿನ ಪಹಣಿ ಇರಬೇಕು. ಜಾತಿ ಪ್ರಮಣ ಪತ್ರ ಹೊಂದಿರಬೇಕು. ರೈತರು ತಮ್ಮ ದಾಖಲಾತಿಗಳೊಂದಿಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬೇಕು. ಸಂಬಂಧಿಕರು ಬಂದರೆ ತಾಡಪತ್ರಿ ನೀಡಲಾಗುವುದಿಲ್ಲ.
Tadpatri Subsidy ಯಾರಿಗೆ ತಾಡಪತ್ರಿ ನೀಡಲಾಗುವುದು?
ಒಂದ ಬಾರಿ ತಾಡಪಲ ಪಡೆದಿದ್ದಲ್ಲಿ 3 ವರ್ಷದವರಿಗೆ ಅದೇ ಫಲಾನುಭವಿಗಳಿಗೆ ಮತ್ತೆ ನೀಡಲು ಬರುವುದಿಲ್ಲ. ಆಯಾ ಪಂಚಾಯತಿಗೆ ಹಂಚಿಕೆಯಾಗಿರುವ ಅಷ್ಟೇ ಸಂಖ್ಯೆ ಮಾತ್ರ ತಾಡಪಾಲ ವಿತರಿಸಲಾಗುವುದು. ಮತ್ತು ಅದೇ ದಿನಾಂಕದಂದು ವಿತರಿಸಲಾಗುವುದು.
Tadpatri Subsidy ಯಾವ ದಿನಾಂಕದಂದು ಅರ್ಜಿ ಸಲ್ಲಿಸಬೇಕು?
ಚಂದಾಪೂರು, ಕಿಷ್ಟಾಪೂರ, ಪಾಕಲ ಹಾಗೂ ಕಡತಾಲ ಗ್ರಾಮದವರು ಜನವರಿ 15 ರಂದು ಅರ್ಜಿ ಸಲ್ಲಿಸಲು ಕೋರಲಾಗಿದೆ.
ಕಾನಾಗಡ್ಡಾ, ಯಾನಾಗುಂದಿ, ತೋಲಮಾಮಡಿ, ಗಂಗಾರಾವಲಪಲ್ಲಿ ಗ್ರಾಮದ ರೈತರು ಜನವರಿ 16 ರಂದು ಅರ್ಜಿ ಸಲ್ಲಿಸಬೇಕು.
ಇಟಕಾಲ ಹಾಗೂ ಬುರಗಪಲ್ಲಿ ಗ್ರಾಮದ ರೈತರು ಜನವರಿ 17 ರಂದು ಅರ್ಜಿ ಸಲ್ಲಿಸಬೇಕು.
ಮುಧೋಳ, ಕದಲಾಪುರ ಹಾಗೂ ಕಡಚರ್ಲಾ ಗ್ರಾಮದ ರೈತರು ಜನವರಿ 20 ರಂದು ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ Bele sala manna status ಇಲ್ಲೇ ಚೆಕ್ ಮಾಡಿ
ಮೇದಕ, ಶಿಲಾರಕೋಟ, ಶಂಕರರಾಜಪೂರ, ಗಜಲಾಪುರ ಗ್ರಾಮದ ರೈತರು ಜನವರಿ 21 ರಂದು ಅರ್ಜಿ ಸಲ್ಲಿಸಬೇಕು.
ಮೋತಕಪಲ್ಲಿ, ಗಾಡದಾನ, ವೆಂಕಟಾಪುರ, ಶಕಲಸಪಲ್ಲಿ ಗ್ರಾಮದ ರೈತರು ಜನವರಿ22 ರಂದು ಅರ್ಜಿ ಸಲ್ಲಿಸಬೇಕು.
ರಿಬ್ಬನಪಲ್ಲಿ, ನಾಡೆಪಲ್ಲಿ, ಖಂಡೇರಾಯನಪಲ್ಲಿ ಗ್ರಾಮದ ರೈತರು ಜನವರಿ 23 ರಂದು ಅರ್ಜಿ ಸಲ್ಲಿಸಲು ಕೋರಲಾಗಿದೆ.
ಉಚಿತವಾಗಿ ಹೊಲಿಗೆಯಂತ್ರ ನೀಡಲು ಅರ್ಜಿ ಆಹ್ವಾನ
ಕಲಬುರಗಿ ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ವತಿಯಿಂದ 2024-25ನೇ ಸಾಲಿಗೆ ಜಿಲ್ಲಾ ವಲಯ ಯೋಜನೆಯಡಿ ಉಚಿತವಾಗಿ ವಿದ್ಯುತ್ಚಾಲಿತ ಹೊಲಿಗೆಯಂತ್ರ ಪಡೆಯಲು ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದ ಹೊಲಿಗೆ ವೃತ್ತಿನಿರತ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ (ಗ್ರಾ.ಕೈ) ಉಪನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಮಹಿಳಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. (ಅರ್ಜಿ ಸಲ್ಲಿಸುವ ಮೊದಲನೇ ದಿನವಾದ ದಿನಾಂಕ: 06-01-2025 ಕ್ಕೆ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷದೊಳಗಿರಬೇಕು. ಅರ್ಜಿದಾರರು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.
ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಸರ್ಕಾರದ ಯಾವುದೇ ಯೋಜನೆಯಡಿ ಈಗಾಗಲೇ ಹೊಲಿಗೆಯಂತ್ರವನ್ನು ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ. ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
2025ರ ಜನವರಿ 18 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ, ಕಮಲಾಪೂರ, ಚಿತ್ತಾಪೂರ, ಕಾಳಗಿ ಹಾಗೂ ಶಹಾಬಾದ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ಮೊಬೈಲ್ ಸಂಖ್ಯೆ-8951620063, ಆಳಂದ, ಅಫಜಲಪೂರ, ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು-9901489919, ಸೇಡಂ ಹಾಗೂ ಚಿಂಚೋಳಿ ಕೈಗಾರಿಕಾ ವಿಸ್ತರಣಾಧಿಕಾರಿಗಳ ಮೊ.ಸಂ.-7259885379 ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ (ಗ್ರಾಮೀಣ ಕೈಗಾರಿಕೆ) ಉಪ ನಿರ್ದೇಶಕರ ಕಚೇರಿಯ ದೂ.ಸಂ.-08472-221784, 295784 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.