Bhu suraksha Yojane

Bhu suraksha Yojane : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಭೂ ಸುರಕ್ಷಾ ಯೋಜನೆಯೂ ಒಂದಾಗಿದೆ. ಈ ಯೋಜನೆಯ ರಾಜ್ಯದಾದ್ಯಂತ  ಲೋಕಾರ್ಪಣೆ ಆಗಿದೆ.

ಈ ಯೋಜನೆಗಳಡಿಯಲ್ಲಿ ಭೂ ದಾಖೆಲೆಗಳು ಡಿಜೀಟಲೀಕರಣ ಮಾಡಲಾಗುತ್ತದೆ. ಹಳೆಯ ದುಸ್ಥಿತಿಯಲ್ಲಿ ಇರುವ ಭೂ ದಾಖಲೆಗಳನ್ನು ಡಿಜಿಟಲ್  ಮಾದರಿಯಲ್ಲಿ ಸರಿಪಡಿಸುವುದೇ ಭೂ ಸುರಕ್ಷಾ ಯೋಜನೆ ಆಗಿದೆ. ದಾಖಲೆಗಳ ಕೊಠಡಿಯಲ್ಲಿ ಜನರಿಗೆಭೂ ದಾಖಲೆಗಳನ್ನುವಿತರಣೆ ಮಾಡುವ ಕೆಲಸ ಮಾಡಲಾಗುತ್ತದೆ.

Bhu suraksha Yojane ಏನಿದು ಭೂ ಸುರಕ್ಷಾ ಯೋಜನೆ?

ಹಳೆಯ ಶಿಥಿಲದಗೊಂಡ  ದಾಖಲೆಗಳನ್ನು ಶಾಸ್ವತವಾಗಿ  ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಆನ್ಲೈನ್ ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನುಅನುಷ್ಠಾನಗೊಳಿಸಲಾಗಿದೆ.

ಭೂ ಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭೂ ದಾಖಲೆಗಳು ಸಹ ಡಿಜೀಟಲೀಕರಣ ಮಾಡಿ ರಕ್ಷಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ರೈತರು ಭೂ ದಾಖಲೆ ಪಡೆಯಲು ಕಚೇರಿಗೆ ಅಲೆಯಬೇಕಿಲ್ಲ. ನೇರವಾಗಿ ಜನರಿಗೆ ಸಿಗುತ್ತದೆ. ಸ್ವಾತಂತ್ರ್ಯ ಪೂರ್ವದ ಅವಧಿಯ ದಾಖಲೆಗಳ್ನು ಇಂಡೆಕ್ಸಿಂಗ್, ಕ್ಯಾಲಾಗಿಂಗ್, ಸ್ಕ್ಯಾನಿಂಗ್ ಹಾಗೂ ಅಪಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ.

ರೈತರು ಈಗ ದಾಖಲೆಗಳನ್ನು ಪಡೆಯಲು ಕಚೇರಿಗೆ ಹೋಗಬೇಕಿಲ್ಲ. ಸುಲಭವಾಗಿ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ ಪಿಎಂ ಕಿಸಾನ್ ಯೋಜನೆಗೆ ಹೀಗೆ ನೋಂದಣಿ ಮಾಡಿ

ಭೂಸುರಕ್ಷಾ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯ 1 ತಾಲೂಕಿನಂತೆ ರಾಜ್ಯದ ಒಟ್ಟು 31 ತಾಲೂಕುಗಳನ್ನು ಪೈಲೆಟ್ ಕಚೇರಿಯಾಗಿ ಆಯ್ಕೆ ಮಾಡಿ, ಫೆಬ್ರವರಿ-2024 ರಿಂದ ಪೈಲೆಟ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಂದಾಯ ಆಯುಕ್ತಾಲಯದ ಭೂಮಿ ಉಸ್ತುವಾರಿ ಕೋಶದಿಂದ “ಕಂದಾಯ ದಾಖಲೆಗಳ ಗಣಕೀಕರಣ” ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ.

31 ಪೈಲೆಟ್ ಕಚೇರಿಗಳ ಪೈಕಿ ಇದುವರೆಗೂ ಕೊಪ್ಪಳ ಜಿಲ್ಲೆಯ ಕಾರಟಗಿ, ಚಿಂಚೋಳಿ, ಯಳಂದೂರು, ಕುರುಗೋಡು, ಯಾದಗಿರಿ, ಹೆಬ್ರಿ ಮತ್ತು ಮೊಳಕಾಲೂರು ಒಟ್ಟು 7 ತಾಲೂಕು ಕಚೇರಿಗಳಲ್ಲಿ ಎ ಮತ್ತು ಬಿ ದಾಖಲೆಗಳ ಗಣಕೀಕರಣ ಪೂರ್ಣಗೊಂಡಿರುತ್ತದೆ. ಎಲ್ಲಾ ಪೈಲೆಟ್ ತಾಲೂಕು ಕಚೇರಿಗಳಿಂದ ಈವರೆಗೆ 14,87,682 ಕಡತಗಳು ಮತ್ತು 1,20,805 ವಹಿಗಳನ್ನು ಒಳಗೊಂಡಂತೆ ಒಟ್ಟು 7.95 ಕೋಟಿ ಪುಟಗಳು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.

ಪ್ರಸ್ತುತ ರಾಜ್ಯದ ಉಳಿದ 209 ತಾಲೂಕು ಕಚೇರಿಗಳಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯವನ್ನು ಜನವರಿ-2025 ರಿಂದ ಪ್ರಾರಂಭಿಸಲಾಗುತ್ತಿದೆ. ಈ ಕಚೇರಿಗಳಿಗೆ ತಲಾ 6 ಡೆಸ್ಕ್ ಟಾಪ್ ಕಂಪ್ಯೂಟರ್‌ಗಳು, 3 ಸ್ಕ್ಯಾನರ್​ಗಳು ಮತ್ತು 6 ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಈಗಾಗಲೇ ಒದಗಿಸಲಾಗಿದೆ. ತಂತ್ರಾಂಶದ ಬಳಕೆಯ ಕುರಿತಂತೆ ಸಂಬಂಧಪಟ್ಟ ಅಧಿಕಾರಿ/ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಈ ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಕಂದಾಯ ಆಯುಕ್ತಾಲಯದಿಂದ ಅಧಿಕಾರಿ/ಸಿಬ್ಬಂದಿ ತಾಲೂಕು ಕಚೇರಿಗಳನ್ನು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಅಗತ್ಯವಿದ್ದಲ್ಲಿ ಸೂಕ್ತ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈತರಿಗೆ ದರಖಾಸ್ತು ಪೋಡಿ ವಿತರಣೆ

ಮೂರು ದಶಕಗಳಿಂದ ಕಾಯುತ್ತಿರುವ ರೈತರಿಗೆ ಕೊನೆಗೂ ದರಖಾಸ್ತು ಪೋಡಿ ಸಿಕ್ತು.  ಹೌದು, ಕಲಬುರಗಿ ಜಿಲ್ಲೆಯ ತಾವರಗೇರಾ ರೈತರಿಗೆ ದರಖಾಸ್ತು ಪೋಡಿ ವಿತರಿಸಲಾಯಿತು.

ಕಲಬುರಗಿ ತಾಲೂಕಿನ ತಾವರಗೇರಾ ಗ್ರಾಮದ 12 ಜನ ರೈತರಿಗೆ ಬುಧವಾರ ಹೊಸ ವರ್ಷದ ದಿನದಂದೇ ಕಲಬುರಗಿ ಜಿಲ್ಲಾಡಳಿತ ದರಖಾಸ್ತು ಪೋಡಿ ವಿತರಿಸುವ ಮೂಲಕ ನೂತನ ವರ್ಷದ ಗಿಫ್ಟ್ ನೀಡಿದೆ.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು, ತಾವರಗೇರಾ ಗ್ರಾಮದ 12 ರೈತರಿಗೆ ಒಟ್ಟಾರೆ 46.36 ಎಕರೆ ಜಮೀನಿನ ಪ್ರತ್ಯೇಕ ಪಹಣಿ ಪತ್ರಿಕೆ, ಫಾರ್ಮ್ -10, ಆಕಾರ್ ಬಂದ್, ಸ್ಕೇಚ್ ನಕಾಶೆ ವಿತರಣೆ ಮಾಡಿದರು.

ತಾವರಗೇರಾ ಗ್ರಾಮದ 50.36 ಎಕರೆ ಸರ್ಕಾರಿ ಗೈರಾಣು ಜಮೀನಿನ್ನು 1993-94ರ  ಅವಧಿಯಲ್ಲಿ ಲ್ಯಾಂಡ್ ಗ್ರ್ಯಾಂಟ್ ಕಮಿಟಿಯಿಂದ ರೈತರಿಗೆ ಉಳುಮೆ ಮಾಡಲು ಜಮೀನು ಮಂಜೂರು ಮಾಡಲಾಗಿತ್ತಾದರೂ, ಪ್ರತಿ ರೈತನಿಗೆ  ಪ್ರತ್ಯೇಕ ಪಹಣಿ, ಹಿಸ್ಸಾಪೋಡಿ ಇದುವರೆಗೂ ಇರಲಿಲ್ಲ. ಒಟ್ಟಾಗಿ ಜಂಟಿ ಪಹಣಿ ಹೆಸರಿನಲ್ಲಿಯೇ ಅವರೆಲ್ಲರೂ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

By admin

Leave a Reply

Your email address will not be published. Required fields are marked *