Good news to farmers: ರೈತರ ಬೆಳೆಗಳಿಗೆ ನೀಡುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ ರೂಪಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2025-26 ರವರೆಗೆ ಮುಂದುವರೆಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಜೊತೆಗೆ ಡಿಎಪಿಗೆ ಸಬ್ಸಿಡಿ ಹೊರತಾಗಿ ಒನ್ ಟೈಮ್ ಪ್ಯಾಕೇಜ್ ರೂಪವಾಗಿ 3850 ಕೋಟಿ ರೂಪಾಯಿ ಸಹಾಯವನ್ನು ಪ್ರಕಟಿಸಿದೆ. ಜನವರಿಯಿಂದಲೇ ಡಿಎಪಿ ಗೊಬ್ಬರದ ಬೆಲೆ ಹೆಚ್ಚಾಗುತ್ತಿದೆ. ಆ ಹೆಚ್ಚಿನ ಹೊರೆ ರೈತರ ಮೇಲೆ ಬೀಳದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಫಸಲ್ ಬಿಮಾ ಯೋಜನೆ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿ ಉಂಟಾದಲ್ಲಿ ಈ ವಿಮೆ ರೈತರ ನೆರವಿಗೆ ಬರುತ್ತದೆ. ಈ ಯೋಜನೆಯ ಅಂದಾಜು ವೆಚ್ಚ 69,517 ಕೋಟಿ ರೂಪಾಯಿ. ಇದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಲು 824.77 ಕೋಟಿ ರೂಪಾಯಿಗಳ ಆವಿಷ್ಕಾರ ಮತ್ತು ತಂತ್ರಜ್ಞಾನ ನಿಧಿ(ಫಿಯಟ್) ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ.
ತಾಂತ್ರಿಕ ಉಪಕ್ರಮಗಳಾದ ಯೆಸ್ ಟೆಕ್ (ತಂತ್ರಜ್ಞಾನ ಬಳಸಿ ಇಳುವರಿ) ಅಂದಾಜು ಮಾಡುವ ವ್ಯವಸ್ಥೆ)ವಿಂಡ್ಸ್ (ಹವಾಮಾನ ಮಾಹಿತಿ ಜಾಲ ಮತ್ತು ದತ್ತಾಂಶ ವ್ಯವಸ್ಥೆ) ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಅಧ್ಯಯನಗಳಿಗೆ ಧನಸಹಾಯ ನೀಡಲು ಈ ನಿಧಿಯನ್ನು ಬಳಸಲಾಗುತ್ತದೆ.
ಇದನ್ನೂ ಓದಿ : FID Check ಆಧಾರ್ ನಂಬರ್ ಹಾಕಿ ಎಫ್ಐಡಿ ಹೀಗೆ ಚೆಕ್ ಮಾಡಿ
ಯೆಸ್ ಟೆಕ್ ಉಪಕ್ರಮವನ್ನು ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಪ್ರಸ್ತುತ ಜಾರಿಗೊಳಿಸಿದ್ದು, ಉಳಿದ ರಾಜ್ಯಗಳಲ್ಲೂ ಅನುಷ್ಠಾನಗೊಳಿಸಲಾಗುತ್ತದೆ. ವಿಂಡ್ಸ್ ಅನ್ನುಕೆಲವೊಂದು ಕಾರಣಗಳಿಂದ ಕಳೆದ ವರ್ಷ ಯಾವ ರಾಜ್ಯವೂ ಅನುಷ್ಠಾನಗೊಳಿಸಿಲ್ಲ.
Good news to farmers ಫಸಲ್ ಬಿಮಾ ಯೋಜನೆ ವಿಸ್ತರಣೆ
ಈ ವರ್ಷ ಮುಕ್ತಾಯವಾಗಲಿರುವ ವಿಮಾ ಯೋಜನೆಯನ್ನು ಇನ್ನೊಂದು ವರ್ಷ ವಿಸ್ತರಣೆ ಮಾಡಲಾಗಿದೆ.ಕ್ಲೇಮ್ ಸೆಟಲ್ಮೆಂಟ್ ತ್ವರಿತಗತಿಯಲ್ಲಿ ನಡೆಸಲು ತಂತ್ರಜ್ಞಾನ ಬಳಕೆ ಮಾಡಲಾಗುವುದು. ವಿಮಾ ಹಣ ರೈತರ ಖಾತೆಗೆ ನೇರ ಜಮೆ ಮಾಡಲಾಗುವುದು.
ಸ್ವಯಂಚಾಲಿತ ಹವಾಮಾನ ಕೇಂದ್ರ
ಹವಾಮಾನ ಮಾಹಿತಿ, ನೆಟ್ವರ್ಕ್ ಡೇಟಾ ಸಿಸ್ಟಮ್ ಉಪಕ್ರಮದಡಿ ಬ್ಲಾಕ್ ಮಟ್ಟದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಹಾಗೂ ಪಂಚಾಯತಿ ಮಟ್ಟದಲ್ಲಿ ಸ್ವಯಂಚಾಲಿತ ಮಳೆ ಮಾಪಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆಯಲು ನೆರವಾಗಲಿದೆ. ಮೊಬೈಲ್ ನೆಟ್ವರ್ಕ್ ಇಲ್ಲದ ಕುಗ್ರಾಮಗಳ ರೈತರು ಈ ಕೇಂದ್ರಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ರೈತರಿಗೆ ಲಾಭವೇನು?
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮುಂದುವರಿಕೆ ರೈತರಿಗೆ ನೆರವಾಗಲಿದೆ. ಹೆಚ್ಚುವರಿ ಒಂದು ವರ್ಷ ನೈಸರ್ಗಿಕ ವಿಕೋಪಗಳಿಂದ ಆದ ಬೆಳೆ ನಷ್ಟಕ್ಕ ಪರಿಹಾರ ಸಿಗಲಿದೆ. ಆ ಮೂಲಕ ಸಂಕಷ್ಟದಲ್ಲಿರುವ ಅನ್ನದಾತರಿಗೆ ಆರ್ಥಿಕ ಸಹಾಯ ಲಭಿಸಲಿದೆ.
ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ
ರೈತರಿಗೆ ಕೈಗೆಟಕುವ ದರದಲ್ಲಿ ಗೊಬ್ಬರ ಒದಗಿಸುವ ಸಲುವಾಗಿ ಡಿ-ಅಮೋನಿಯಂ ಫಾಸ್ಪೆಟ್ (ಡಿಎಪಿ) ಗೊಬ್ಬರವನ್ನು ಇನ್ನೂ ಒಂದು ವರ್ಷಗಳ ಕಾಲ ಸಬ್ಸಿಡಿ ದರದಲ್ಲಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 3850 ಕೋಟಿ ರೂಪಾಯಿ ನೆರವು ನೀಡಲು ಸಂಪುಟ ಸಭೆ ನಿರ್ಧಿಸಿದೆ. ಪ್ರಸ್ತುತ ಪ್ರತಿ 50 ಕೆಜಿ ಡಿಎಪಿ ಗೊಬ್ಬರವನ್ನು ರೈತರಿಗೆ ಸರ್ಕಾರ1350 ರೂಪಾಯಿಗೆ ವಿತರಣೆ ಮಾಡುತ್ತಿದೆ.ಇದಕ್ಕಾಗಿ ಪ್ರತಿ ಟನ್ ಗೆ 3500 ರೂಪಾಯಿ ನಷ್ಟು ಸಬ್ಸಿಡಿ ನೀಡುತ್ತಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 10 ವರ್ಷಗಳ ಅವಧಿಯಾದ 2004-14 ರಲ್ಲಿ ರಸಗೊಬ್ಬರ ಸಬ್ಸಿಡಿಗೆ 5.5 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಿದ್ದರೆ, 2014-24 ರಲ್ಲಿ ಸಬ್ಸಿಡಿ ಮೊತ್ತ11.9 ಲಕ್ಷ ಕೋಟಿ ರೂಪಾಯಿಗೆ ಏರಿದೆ.