FID Check

FID Check : ರೈತರು ತಮ್ಮ ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲೇ ಫ್ರೂಟ್ಸ್ ಐಡಿಯನ್ನು ಚೆಕ್ ಮಾಡಬಹುದು. ಹೌದು, ರೈತರು ತಮ್ಮ ಫ್ರೂಟ್ಸ್ ಐಡಿಯನ್ನುಚೆಕ್ ಮಾಡಲು ಯಾವ ನೆಟ್ ಸೆಂಟರ್ ಗಳಿಗೂ ಹೋಗಬೇಕಿಲ್ಲ. ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ಮೊಬೈಲ್ ನಲ್ಲಿ ನೆಟ್ ಆನ್ ಇದ್ದರೆ ಸಾಕು, ನೀವೇ ಚೆಕ್ ಮಾಡಬಹುದು.

FID Check : ಆಧಾರ್ ನಂಬರ್ ಹಾಕಿ ಫ್ರೂಟ್ಸ್ ಐಡಿ ಚೆಕ್ ಮಾಡುವುದು ಹೇಗೆ?

ಫ್ರೂಟ್ಸ್ ಐಡಿ ಚೆಕ್ ಮಾಡುವ ಮೊದಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಅಥವಾ ಆಧಾರ್ ಕಾರ್ಡ್ ನೆನಪಿಪರಬೇಕು.  ಆಧಾರ್  ಆಧಾರ್ ಕಾರ್ಡ್ ನಂಬರ್ ಹಾಕಿ ಫ್ರೂಟ್ಸ್ ಐಡಿ ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗಲಿದೆ. ಅದೇ  ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ಆಗಿರುತ್ತದೆ. . ಅಲ್ಲಿ ಫಾರ್ಮರ್ ಡಿಟೇಲ್ಸ್ ಕೆಳಗಡೆ ನಿಮ್ಮ ಆಧಾರ್ ನಂಬರ್ ಹಾಕಬೇಕಾಗುತ್ತದೆ.  ನಂತರ Search ಮೇಲೆ ಕ್ಲಿಕ್ ಮಾಡಬೇಕು. ನೀವು ಫ್ರೂಟ್ಸ್ ಐಡಿಯನ್ನು ಹೊಂದಿದ್ದರೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಫ್ರೂಟ್ಸ್ ಐಡಿ, ಪಿಎಂಕೆಐಡಿ ಇದ್ದರೆ ಪಿಎಂಕೆಐಡಿ ಹಾಗೂ ನಿಮ್ಮ ಹೆಸರು ಕಾಣಿಸುತ್ತದೆ.  ಈ ಫ್ರೂಟ್ಸ್ ಐಡಿಯನ್ನು ನೀವು ಬರೆದಿಟ್ಟುಕೊಳ್ಳಬೇಕು. ಏಕೆಂದರೆ ಮುಂದೆ ಸರ್ಕಾರದ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ.

FID Check : ಫ್ರೂಟ್ಸ್ ಐಡಿ ಎಲ್ಲಿ ಎಲ್ಲಿ ಕೆಲಸಕ್ಕೆ ಬರುತ್ತದೆ?

ಫ್ರೂಟ್ಸ್ ಐಡಿಯು ರೈತರ ಅತೀ ಮುಖ್ಯವಾದ ಕಾರ್ಡ್ ಆಗಿದೆ. ಆಧಾರ್ ಕಾರ್ಡ್, ರೇಶನ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಂತೆ ಫ್ರೂಟ್ಸ್ ಐಡಿಯೂ ಅತೀ ಮುಖ್ಯವಾದ ದಾಖಲೆಯಾಗಿದೆ. ಈ ದಾಖಲೆಯಿಂದ ರೈತರು ಬಿತ್ತನೆಯಿಂದ ಹಿಡಿದು ಕೊಯ್ಲುವರೆಗೆ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ಖರೀದಿಸಲು ಉಪಯೋಗವಾಗುತ್ತದೆ. ಬಿತ್ತನೆ ಬೀಜ ಪಡೆಯಲು ಸಹ ಫ್ರೂಟ್ಸ್ ಐಡಿ ಬೇಕಾಗುತ್ತದೆ. ತಾಡಪತ್ರಿ ಸಹಾಯಧನದಲ್ಲಿ ಪಡೆಯಲು, ಬೆಂಬಲ ಬೆಲೆಯಲ್ಲಿ ಮುಂಗಾರು ಹಿಂಗಾರು  ಬೆಳೆಗಳನ್ನು ಮಾರಾಟ ಮಾಡಲು ಸಹ ಫ್ರೂಟ್ಸ್ ಐಡಿ ಬೇಕಾಗುತ್ತದೆ.

ಇದನ್ನೂ ಓದಿ Pm kisan hana ಯಾರಿಗೆ ಜಮೆಯಾಗುತ್ತದೆ? ಇಲ್ಲೇ ಚೆಕ್ ಮಾಡಿ

ತೋಟಗಾರಿಕೆ, ಕೃಷಿ ಇಲಾಖೆ., ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ರೈತರು ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನುಪಡೆಯಲು ಫ್ರೂಟ್ಸ್ ಐಡಿ ಕೇಳಲಾಗುವುದು. ಇತ್ತೀಚೆಗೆ ಬ್ಯಾಂಕಿನಲ್ಲಿ ಸಾಲ ನೀಡಲು ಸಹ ಫ್ರೂಟ್ಸ್ ಐಡಿಯನ್ನು ಕೇಳಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ರೈತರು ಫ್ರೂಟ್ಸ್ ಐಡಿಯನ್ನು ಹೊಂದಿರಬೇಕು.

ನಿಮ್ಮ ಫ್ರೂಟ್ಸ್ ಐಡಿ ಆಗಿಲ್ಲವೇ? ಇಲ್ಲಿ ಅರ್ಜಿ ಸಲ್ಲಿಸಿ

ಫ್ರೂಟ್ಸ್ ಐಡಿ ಇಲ್ಲದಿದ್ದರೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಫ್ರೂಟ್ಸ್ ಐಡಿ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಆಧಾರ್ ಕಾರ್ಡ್ ದೊಂದಿಗೆ ಜಮೀನಿನ ದಾಖಲೆಗಳು, (ಪಹಣಿ) ಬ್ಯಾಂಕ್ ಪಾಸ್ ಬುಕ್ ಪ್ರತಿ, ಇತ್ತೀಚಿನ ಫೋಟೋ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಈ ಎಲ್ಲಾ ದಾಖಲೆಗಳೊಂದಿಗೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಫ್ರೂಟ್ಸ್ ಐಡಿಗಾಗಿ ನೋಂದಣಿ ಮಾಡಿಸಬಹುದು.

ಒಂದು ವೇಳೆ ನಿಮಗೆ ಮೊಬೈಲ್ ಬಳಸಲು ಸರಿಯಾಗಿ ಬರುತ್ತಿದ್ದರೆ ನೀವೇ ಫ್ರೂಟ್ಸ್ ಐಡಿಗಾಗಿ ನೋದಣಿ ಮಾಡಿಸಬಹುದು. ಇದಕ್ಕಾಗಿಯೂ ಯಾರ ಸಹಾಯ ಬೇಕಿಲ್ಲ. ಕೇವಲ ಒಂದೆರಡು ನಿಮಿಶದಲ್ಲಿ ನೀವೇ ಫ್ರೂಟ್ಸ್ ಐಡಿಗೆ ನೋಂದಣಿ ಮಾಡಿಸಬಹುದು.

By admin

Leave a Reply

Your email address will not be published. Required fields are marked *