Krishimela

Krishimela : ವಿಜಯಪುರ ನಗರದ ಹೊರವಲಯದಲ್ಲಿರುವ ಹಿಟ್ನಳ್ಳಿ ಫಾರ್ಮ್ ನಲ್ಲಿ ಕೃಷಿ ವಿಶ್ವವಿದ್ಯಾಲಯ ಆವರಣ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಜನವರಿ 11 ರಿಂದ 13 ರವರೆಗೆ ಬೃಹತ್ ಕೃಷಿ ಮೇಳ ಆಯೋಜಿಸಲಾಗಿದೆ.

Krishimela ದಲ್ಲಿ ಏನೇನಿರಲಿದೆ?

ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿಯ ಜೊತೆಗೆ ಬೃಹತ್ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ರೈತರಿಗೆ ಆಧುನಿಕ ಬೇಸಾಯ ಕ್ರಮಗಳ ಕುರಿತಂತೆ ಕಾಲ ಕಾಲಕ್ಕೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ನಿರಂತರ ಸಂಶೋಧನೆಗಳ ಫಲಿತಾಂಶಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿ ಮೇಳಗಳಂತಹ ಬೃಹತ್ ವಿಸ್ತರಣಾ ಕಾರ್ಯಕ್ರಮಗಳು ಬಹಳ ಮಹತ್ವವನ್ನುಪಡೆದಿವೆ.  ರೈತರಿಗೆ ಆಶಾಕಿರಣವಾಗಿರುವ ಈ ಸಲದ ಕೃಷಿ ಮೇಳದ ಸಮಿತಿ ಅಧ್ಯಕ್ಷ ಹಾಗೂ ಡೀನ್ ಡಾ ಅಶೋಕ ಸಜ್ಜನ, ಸಹ ಸಂಶೋಧನಾ ನಿರ್ದೇಶಕಡಾ. ಎಸ್.ಬಿ. ಜಗ್ಗಿನವರ, ಜಂಟಿ ಕೃಷಿ ನಿರ್ದೇಶಕಿ ಡಾ. ರೂಪಾ ಎಲ್. ಸಹ ವಿಸ್ತರಣಾ ನಿರ್ದೇಶಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಆರ್.ಬಿ. ಬೆಳ್ಳಿ ಕೋರಿದ್ದಾರೆ.

ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ

ಕಾರವಾರ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ 5 ವಾರದ ಕೋಳಿ ಮರಿಗಳನ್ನುಉತ್ಪಾದಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ತಲಾ 20 ರಂತೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತ ರೈತ ಮಹಿಳೆಯರು ಜನವರಿ 8 ರೊಳಗೆ ಪಶುಪಾಲನಾ ಇಲಾಖೆಯ ಆಯಾ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗೆ (ಆಡಳಿತ) ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗೆ ಆಯಾ ತಾಲೂಕು ಆಸ್ಪತ್ರೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರಿಗೆ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರವು ರೈತರಿಗೆ ಆಧುನಿಕ ಕೋಳಿ ಸಾಕಾಣಿಕೆ ಕುರಿತ ಉಚಿತ ತರಬೇತಿ ನೀಡಲು ಉದ್ದೇಶಿಸಿದ್ದು, ಆಸಕ್ತರು ನಿಗದಿ ಪಡಿಸಿದ ದಿನಾಂಕದಂದು ಬೆಳಗ್ಗೆ10 ಗಂಟೆಗೆ ತರಬೇತಿಗೆ ಹಾಜರಾಗಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ Pm kisan hana ಯಾರಿಗೆ ಜಮೆಯಾಗುತ್ತದೆ? ಇಲ್ಲೇ ಚೆಕ್ ಮಾಡಿ

ತರಬೇತಿಯನ್ನು ಡಿಸೆಂಬರ್ 30 ಮತ್ತು 31 ರಂದು ಕುಣಿಗಲ್ ರಸ್ತೆಯಲ್ಲಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ನೀಡಲಾಗುವುದು.

ತರಬೇತಿಗೆ ಹಾಜರಾಗಲಿಚ್ಚಿಸುವವರು ಇತ್ತೀಚಿನ ತಮ್ಮ 2 ಪಾಸ್ ಪೋರ್ಟ್ ಅಳತೆ ಭಾವಚಿತ್ರ, ರೈತರ ಫ್ರೂಟ್ಸ್ ಐಡಿ ಸಂಖ್ಯೆ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದವರಾಗಿದ್ದಲ್ಲಿ) ಕಡ್ಡಾಯವಾಗಿ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕೀಯ ಸಂಸ್ಥೆ, ದೂರವಾಣಿ ಸಂಖ್ಯೆ 0816 2251214 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ ವಿಶ್ವವಿದ್ಯಾಲಯವು ಜೆಎಸ್.ಎಸ್ ಮಹಿಳಾ ಕಾಲೇಜು, ರಿಚ್ ಮಚ್ ಹೈಯರ್ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ವೃತ್ತಿ ಆಧಾರಿತ ಕೌಶಲ್ಯ ತರಬೇತಿಗೆ ವಿಧ್ಯಾಭ್ಯಾಸ  ತೊರೆದ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜನವರಿಯಿಂದ ಮಾರ್ಚ್ ತಿಂಗಳವರೆಗೆ ಒಟ್ಟು 3 ತಿಂಗಳ ಅವಧಿಯ ಜಾಬ್ ಓರಿಯಂಟೆಡ್ ತರಬೇತಿಯನ್ನು ಉಚಿತವಾಗಿ ನಗರದ ಜೆಎಸ್ಎಸ್. ಮಹಿಳಾ ಕಾಲೇಜಿನಲ್ಲಿ ನೀಡಲಾಗುತ್ತದೆ. 18 ರಿಂದ 30 ರ ವಯೋಮಿತಿಯ ವಿಧ್ಯಾಭ್ಯಾಸ ತೊರೆದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ತರಬೇತಿ ಪಡೆಯಬಹುದು. ಬೆಳಗ್ಗೆ 10 ರಿಂದ 4 ಗಂಟೆಯವರೆಗೆ ತರಬೇತಿ ನೀಡಲಿದ್ದು,  ಒಂದೇ ಬ್ಯಾಂಚಿನಲ್ಲಿ 25 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ತರಬೇತಿ ಪಡೆಯಲು https://forms.gle/LgZnsejt77R5tQar9 ನಲ್ಲಿ ನೋಂದಣಿ ಮಾಡಿಸಬೇಕು.

ಹೆಚ್ಚಿನ ಮಾಹಿತಿಗೆ ಪ್ರಮೋದ 9886910296 ಸಂಪರ್ಕಿಸುವಂತೆ ಚಾಮರಾಜನಗರ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

By admin

Leave a Reply

Your email address will not be published. Required fields are marked *