Krishi Bhagya Subsidy

Krishi Bhagya Subsidy ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರೈತರಿಗೆ ಶೇ. 90 ಸಬ್ಸಿಡಿ ಸಿಗಲಿದೆ. ಹೌದು, ಆಸಕ್ತ ರೈತರು ತಮ್ಮಹತ್ತಿರದ ಕೃ ಷಿ ಇಲಾಖೆಯಿಂದ ಆಹ್ವಾನಿಸುವಾಗ ಸಲ್ಲಿಸಬೇಕು.

ರಾಜ್ಯದಲ್ಲಿ ಮಳೆಯಾಶ್ರಿತ ರೈತ ಸಮುದಾಯದ ಜೀವನೋಪಾಯವನ್ನು ಉತ್ತಮಪಡಿಸಲು ಹಾಗೂ ಅನಾವೃಷ್ಟಿ ಬರಪರಿಸ್ಥಿತಿಯಲ್ಲಿ ಬೆಳೆ ಒಣಗುವುದನ್ನು ತಪ್ಪಿಸಿ ಸಾಮಾನ್ಯ ಇಳುವರಿ ಪಡೆಯಲು ಅನುಕೂಲವಾಗಲು ಈ ಹಿಂದೆ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಮತ್ತೊಮ್ಮೆ ಜಾರಿಗೆ ತರಲಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಏನೇನು ನೀಡಲಾಗುವುದು?

ಸ್ಥಳದಲ್ಲಿಯೇ ಮಣ್ಣಿನ ತೇವಾಂಶ ಸಂರಕ್ಷಣೆ ಕ್ರಮಗಳು, ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆಗಳು (ಕೃಷಿ ಹೊಂಡ) ಕೃಷಿ ಹೊಂಡಕ್ಕೆ 250 – 420 ಮೈಕ್ರಾನ್ ದಪ್ಪದ ಪಾಲಿಥಿನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್ ಸೆಟ್ (10 ಹೆಚ್.ವಿ ರವರೆಗೆ) ಅಥವಾ ಸೋಲಾರ್ ಪಂಪ್ ಸೆಟ್ , ಬೆಳೆಗಳಿಗೆ ನೀರು ಒದಗಿಸಲು ತುಂತುರು  ಹನಿ ನೀರಾವರಿ ಉಪಕರಣಗಳ ಅಳವಡಿಕೆ, ಈ ಎಲ್ಲಾ  ಘಟಕಗಳ ಅಳವಡಿಕೆಗೆ ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 80 ರಷ್ಟು  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತಿದೆ.

Krishi Bhagya Subsidy ಯಾರು ಅರ್ಜಿ ಸಲ್ಲಿಸಬಹುದು?

ಕೃಷಿ ಭಾಗ್ಯ ಯೋಜನೆಯ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗುವುದು.  ಆಗ ರೈತರು ಅರ್ಜಿ ಸಲ್ಲಿಸಬೇಕಾಗುತ್ತದೆ. ಕೃಷಿ ಭಾಗ್ಯ ಯೋಜನೆಯಡಿ  ಸವಲತ್ತು ಪಡೆದಿರುವ ರೈತರು ಹಾಗೂ ನರೇಗಾ ಯೋಜನೆಯಡಿ ಸವಲತ್ತು ಪಡೆದಿರುವ ರೈತರನ್ನು ಹೊರತುಪಡಿಸಿ ಉಳಿದ ಎಲ್ಲಾ ರೈತ ಬಾಂಧವರು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹಬುದು.

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?

ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಮೀನಿನ ಪಹಣಿ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ರೈತರ ಎಫ್ಐಡಿ ಇರುವುದು ಕಡ್ಡಾಯವಾಗಿದೆ. ಇದರೊಂದಿಗೆ ಇತ್ತೀಚನ ಭಾವಚಿತ್ರಇರಬೇಕು. ಈ ಹಿಂದೆ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದಿರಬಾರದು.

ಇದನ್ನೂ ಓದಿ Rabi crop compensation 25 ಕೋಟಿ ವಿಮೆ ಹಣ ಬಿಡುಗಡೆ

ಕೃಷಿ ಹೊಂಡ ಕುರಿತಂತೆ ಹಾಗೂ ಸಬ್ಸಿಡಿಗಳ ಕುರಿತು ಹೆಚ್ಚಿನ ಮಾಹಿತಿಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಲು ಕೋರಲಾಗಿದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಬ್ಸಿಡಿ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿಯೂ ರೈತರಿಗೆ ಸಬ್ಸಿಡಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಸಲ್ಲಿಸುವ ರೈತರು ನೀರಾವರಿ ಸೌಲಭ್ಯ ಹೊಂದಿರಬೇಕು. ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಮೀನಿನ ಪಹಣಿ (ಆರ್.ಟಿ.ಸಿ) ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಸಹ ಇರಬೇಕು.

ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳು

ಫಲಾನುಭವಿಗಳು ತೋಟಗಾರಿಕೆ ಬೆಳೆಗಳನ್ನ ಬೆಳೆಯುವ ರೈತರಾಗಿರಬೇಕು ಅಥವಾ ತೋಟಗಾರಿಕೆ ಬೆಳೆ ಬೆಳೆ ಬೆಳೆಯುವ ಆಸಕ್ತಿ ಹೊಂದಿರಬೇಕು. ಹಾಗೂ ಸೂಕ್ಷ್ಮ ನೀರಾವರಿ ಅಳವಡಿಸಿದ ನಂತರ ತೋಟಗಾರಿಕೆ ಬೆಳೆಗಳನ್ನೇ ಬೆಳೆಯಬೇಕು. ಫಲಾನುಭವಿಗಳು ನೀರಾವರಿ ಮೂಲವನ್ನು ಹೊಂದಿರಬೇಕು. ತನ್ನ ಸ್ವಂತ ನೀರಾವರಿ ಮೂಲ ಇಲ್ಲದಿದ್ದಲ್ಲಿ ಬೇರೆ ರೈತರನ್ನು ಈ ಸಂಬಂಧ ಒಪ್ಪಿಗೆ ಪತ್ರ  ಪಡೆದು ಸಲ್ಲಿಸಬೇಕು. ಹಾಗೂ ಸೂಕ್ಷ್ಮ ನೀರಾವರಿಗೆ ಯೋಗ್ಯವಿರುವಂತಹ ನೀರನ್ನು ಹೊಂದಿರಬೇಕು.

ಯಾರಿಗೆ ಎಷ್ಟು ಸಿಗಲಿದೆ ?

ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿದ ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ  ಪಂಗಡ ವರ್ಗದ ರೈತರು ಆರ್.ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಗುರುತಿನ ಚೀಟಿ, ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಇತ್ತೀಚಿನ ಫೋಟೋ ಇರಬೇಕು.

ಗರಿಷ್ಠ 2 ಹೆಕ್ಟೇರ್ ಪ್ರದೇಶದವರಿಗೆ ಶೇ. 90 ರಷ್ಟು ಸಹಾಯಧನ ಹಾಗೂ ಇತರ ರೈತರಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರಿಗೆ ಶೇ. 75 ರಷ್ಟು ಸಹಾಯಧನ ನೀಡಲಾಗುವುದು.

 

By admin

Leave a Reply

Your email address will not be published. Required fields are marked *