Rabi crop compensation : ಹವಾಮಾನ ವೈಪರೀತ್ಯದ ಕಾರಣಕ್ಕೆ ಕಳೆದ ವರ್ಷ ನಷ್ಟದ ಕೂಪದಲ್ಲಿದ್ದ ರಾಮನಗರ ಜಿಲ್ಲೆಯ ಮಾವು ಬೆಳೆಗಾರರ ಖಾತೆಗೆ 2023ನೇ ಸಾಲಿನಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಮಾವು ವಿಮೆ ಪಾವತಿಯಾಗಿದೆ.ಬೆಳೆ ಕೈ ಕೊಟ್ಟಿದ್ದರಿಂದ ಮುಂದೇನು ಎಂಬ ಚಿಂತೆಯಲ್ಲಿದ್ದ ಜಿಲ್ಲೆಯ 10,964 ರೈತರಿಗೆ ವಿಮೆಯು ಆಸರೆಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಎಂ.ಎಸ್. ತಿಳಿಸಿದರು.
ರಾಜ್ಯದಲ್ಲಿ ಮಾವುಬೆಳೆಯುವ ಜಿಲ್ಲೆಗಳ ಪೈಕಿ ರಾಮನಗರ ಜಿಲ್ಲೆ ಎರಡನೇ ಸ್ಥಾನದಲ್ಲಿರುವ ಕಾರಣ ಮಾವು ಬೆಳೆಗಾರರಿಗೆ ಸಂದರ್ಭದಲ್ಲಿ ಮಾಹಿತಿನೀಡಿದ ಅವರಿಗೆ, ಇಲ್ಲಿ ವರ್ಷದಿಂದ ವರ್ಷಕ್ಕೆ ಮಾವು ವಿಮೆ ಮಾಡಿಸುತ್ತಿರುವ ಬೆಳೆಗಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ.
2023ನೇ ಸಾಲಿನ 10,964 ಬೆಳೆಗಾರರ ನೋಂದಣಿ ಕಳೆದ 8 ವರ್ಷಗಳಲ್ಲಿ ಆಗಿರುವ ದಾಖಲೆಯ ನೋಂದಣಿಯಾಗಿದೆ.ಅದೇ ರೀತಿ 25 ಕೋಟಿ ರೂಪಾಯಿ ಮೊತ್ತ ಪಾವತಿಯೂ ಇಷ್ಟು ವರ್ಷಗಳಲ್ಲಿನ ಗರಿಷ್ಠ ಮೊತ್ತವಾಗಿದೆ ಎಂದು ಹೇಳಿದರು.
ರೈತರು ಬೆಳೆ ಸಾಲದ ಅರ್ಜಿಗಳೊಂದಿಗೆ ಪಹಣಿ, ಆಧಾರ್ ಕಾರ್ಡ್ತ, ಬ್ಯಾಂಕ್ ಪಾಸ್ ಬುಕ್, ಸ್ವಯಂ ಘೋಷಿತ ಬ್ಯಾಂಕ್ ವಿವರಗಳನ್ನುನೀಡಿ ಹತ್ತಿರದ ಬ್ಯಾಂಕ್, ಸಾಮಾನ್ಯ ಕೇಂದ್ರ, ಗ್ರಾಮ ಒನ್ ಹಾಗೂ ನೋಂದಾಯಿತ ಎಫ್.ಪಿಓಗಳ ಮೂಲಕ ವಿಮೆಗೆ ನೋಂದಣಿ ಅವಕಾಶ ಕಲ್ಪಿಸಲಾಗುತ್ತದೆ ಎಂದುತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ತಿಳಿಸಿದ್ದಾರೆ.
Rabi crop compensation ಹಿಂಗಾರು ಬೆಳೆ ವಿಮೆಗೆ ಇಂದು ಕೊನೆಯ ದಿನ
ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 16 ಕೊನೆಯ ದಿನವಾಗಿದೆ. ಹೌದು, ರೈತರು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 16 ದಿನವಾಗಿದೆ ಎಂಬುದನ್ನು ಮೊಬೈಲ್ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಮೊಬೈಲ್ನಲ್ಲಿ ಹಿಂಗಾರು ಬೆಳೆ ಕೊನೆಯ ದಿನ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಹಿಂಗಾರು ಬೆಳೆ ವಿಮೆ ಕೊನೆಯ ದಿನಾಂಕ ಯಾವುದೆಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/PublicHome.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. Farmers ಕೆಳಗಡೆ ಪ್ರಿಮಿಯಂ ಕ್ಯಾಲ್ಕುಲೇಟರ್, ಕ್ರಾಪ್ ಯು ಕ್ಯಾನ್ ಇನ್ಸುರ್, ಚೆಕ್ ಸ್ಟೇಟಸ್, ಫೈಂಡ್ ಗ್ರಾಮ್ ಪಂಚಾಯತ್, ಕ್ರಾಪ್ ಇನ್ಸುರೆನ್ಸ್ ಡಿಟೇಲ್ ಆನ್ ಸರ್ವೆನಂ. ಅದರ ಕೆಳಗಡೆ view cut off Dates ಕಾಣುತ್ತದೆ. ಅದರ ಮೇಲೆ ಕ್ಲಿಕ್ಮಾಡಬೇಕು. ಆಗ ಇನ್ನೊಂದುಪೇಜ್ ತೆರೆದು ಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಯಲ್ಲಿ ನೀವು ಯಾವ ಯಾವ ಬೆಳೆಗಳಿಗೆ ಡಿಸೆಂಬರ್ 16 ರೊಳಗೆ ವಿಮೆ ಮಾಡಿಸಬಹುದು ಎಂಬುದು ಕಾಣಿಸುತ್ತದೆ.
ಅತೀ ಶೀಘ್ರದಲ್ಲಿ ಬೆಳೆ ಹಾನಿ ಪರಿಹಾರ ಜಮೆ
ರಾಜ್ಯದಲ್ಲಿ ಹಿಂಗಾರು ಮಳೆ ಅವಧಿಯಲ್ಲಿ 1.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಅವಗಳಿಗೆ ಸಂಬಂದಿಸಿದಂತೆ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಒಂದು ವಾರದಲ್ಲಿ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಇದನ್ನೂ ಓದಿ ಉಚಿತವಾಗಿ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ
ಅವರು ವಿಕಾಸ ಸೌಧದಲ್ಲಿ ಮಾತನಾಡಿ, ಹಿಂಗಾರು ಮಳೆಯಿಂದ ಅಂದಾಜು 120 ಕೋಟಿ ರೂಪಾಯಿಯವರೆಗೆ ನಷ್ಟ ಉಂಟಾಗಿದೆ. ರೈತರಿಗೆ ಪರಿಹಾರ ನೀಡುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನ ಗೂಗಲ್ ನಲ್ಲಿ ಪರಿಹಾರ ಪೇಮೆಂಟ್ ಟೈಪ್ ಮಾಡಿ ನಂತರ ಅಲ್ಲಿ ಕಾಣುವ ಲಿಂಕ್ ಮೇಲೆ ಕ್ಲಿಕ್ಮಾಡಿ ಚೆಕ್ ಮಾಡಬಹುದು.