Redgram crop compensation

Redgram crop compensation: ಕಲಬುರಗಿ ಜಿಲ್ಲಾದ್ಯಂತ ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ಒಣ ಬೇರು ಕೊಳೆ ರೋಗದಿಂದ ತೊಗರಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ವಿವಿಧ ಗ್ರಾಮಕ್ಕೆ ತೆರಳಿ ತೊಗರಿ ಬೆಳೆ ಹಾನಿ ಪರಿಶೀಲಿಸಿದರು.

ಕಲಬುರಗಿ ತಾಲೂಕಿನ ಪಟ್ಟಣ, ಆಳಂದ ತಾಲೂಕಿನ ಕಡಗಂಚಿ ಹಾಗೂ ಅಫಜಲ್ಪುರ ತಾಲೂಕಿನ ನೀಲೂರು ಗ್ರಾಮಗಳ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ತೊಗರಿ ಬೆಳೆ ಒಣಗುತ್ತಿರುವ ಬಗ್ಗೆ ವೀಕ್ಷಿಸಿ ರೈತರಿಂದ ಬೆಳೆ ಹಾನಿ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಬೆಳೆ ವಿಮೆ (ಸ್ಥಳೀಯ ವಿಕೋಪ)ದ ಜಿಲ್ಲಾಮಟ್ಟದ  ಸಮಿತಿ ಸಭೆ ಬುಧವಾನ ನಡೆಸಿದ್ದು, ಪ್ರಸಕ್ತ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ, ಉದ್ದು, ಹೆಸರು, ಹತ್ತಿ, ಸೋಯಾಬಿನ್ ಸೇರಿದಂತೆ ಇತರೆ ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿರುವ ಅಂದಾಜು ಜಿಲ್ಲೆಯ 2.03 ಲಕ್ಷರೈತರಿಗೆ 76 .94 ಕೋಟಿ ರೂಪಾಯಿ ಸ್ಥಳೀಯ ವಿಕೋಪ ಘಟಕದಡಿ ಮಧ್ಯಂತರ ಪರಿಹಾರ ರೈತರ ಖಾತೆಗೆ ಜಮೆ ಮಾಡಲು ಇಫ್ಕೋ-ಟೊಕಿಯೋ ಫಸಲ್ ಬಿಮಾ ಸಂಸ್ಥೆಗೆ ಸೂಚಿಸಲಾಗಿದೆ ಎಂದು ನೆರೆದ ರೈತರಿಗೆ ಅಭಯ ನೀಡಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ನೀರಾವರಿ ಸೌಲಭ್ಯವಿರುವ ರೈತರು ಕೂಡಲೇ ಒಂದು ಸಲ ನೀರನ್ನು ತೊಗರಿ ಬೆಳೆಗೆ ಹಾಯಿಸಲು ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಅಂತರ ಬೇಸಾಯ ಕೈಗೊಂಡು ಬಿರುಕುಗಳನ್ನು ಮುಚ್ಚಲು ಕ್ರಮವಹಿಸಬೇಕೆಂದು ರೈತರಿಗೆ ಸಲಹೆ ನೀಡಿದರು.

ಇದನ್ನೂ ಓದಿ :

ಈ ಸಂದರ್ಭದಲ್ಲಿ ಉಪನಿರ್ದೇಶಕ ಸಂತೋಷ ಇನಾಂದಾರ, ಕೃಷಿ ಉಪನಿರ್ದೇಶಕ ಸೋಮಶೇಖರ್ ಬಿರಾದಾರ, ಕಲಬುರಗಿ ತಹಶೀಲ್ದಾರ ಆನಂದ ಕೆ. ಆಳಂದ ತಹಶೀಲ್ದಾರ ಅಣ್ಣಾರಾವ್ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.

Redgram crop compensation ಬೆಳೆ ವಿಮೆ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಇಲ್ಲೇ ಚೆಕ್ ಮಾಡಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಪಾವತಿಸಿದ ರೈತರು ಬೆಳೆ ವಿಮೆ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು,

ನಿಮ್ಮ ವಿಮಾ ಅರ್ಜಿ ಸ್ಟೇಟಸ್ ಚೆಕ್ ಮಾಡಲು  ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. . ಆಗ ನಿಮಗೆ ಕ್ರಾಪ್ ಇನ್ಸುರೆನ್ಸ್ ಸ್ಟೇಟಸ್ ಚೆಕ್ ಮಾಡುವ ಪೇಜ್ ಕಾಣಿಸುತ್ತದೆ. ಮಾಡಬೇಕು ಅಲ್ಲಿ ನೀವು ಮುಂಗಾರು (Khariff) ಆಯ್ಕೆ ಮಾಡಿಕೊಳ್ಳಬೇಕು.  ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.  Farmers ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊದು ಪೇಜ್ ತೆರೆದುಕೊಳ್ಳುತ್ತದೆ.

ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.  ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಒಂದು ವೇಳೆ ನಿಮಗೆ ಕ್ಯಾಪ್ಚ್ಯಾ ಕೋಡ್ ಸರಿಯಾಗಿ ಕಾಣಿಸದಿದ್ದರೆ Refress ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಕ್ಯಾಪ್ಚ್ಯಾ ಕೋಡ್ ಅಪ್ಡೇಟ್ ಆಗುತ್ತದೆ. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಬೇಕು.  ನಿಮ್ಮ ಬೆಳೆ ವಿಮೆಯ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಆಲ್ಲಿ ನೀವು ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿನೀವು ಯಾವ ಬೆಳೆಗೆ ವಿಮೆ ಮಾಡಿಸಿದ್ದೀರಿ? ನಿಮಗೆ ಬೆಳೆ ವಿಮೆ ಹಣ ಎಷ್ಟು ರೂಪಾಯಿಯವರೆಗೆ ಜಮೆ ಆಗಬಹುದು ಎಂಬ ಮಾಹಿತಿ ಕಾಣಿಸುತ್ತದೆ.

 

By admin

Leave a Reply

Your email address will not be published. Required fields are marked *