cyclone heavy rain : ಮುಂದಿನ 10 ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸುಧ್ಯತೆ ಇದ್ದು, ಇದರ ಪರಿಣಾಮದಿಂದಾಗಿ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮದಿಂದಾಗಿ ಗುರುವಾರ ಬೆಳಗ್ಗೆಯಿಂದಲೇ ವಿಜಯಪುರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ. ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಜನರುಮನೆ ಹೊರ ಬರಲು ಹಿಂಜರಿಯುತ್ತಿದ್ದಾರೆ. ಶಾಲೆಗಳಿಗೆ ಹೋಗಲುವುದಕ್ಕೆ ಮಕ್ಕಳು ಪರದಾಡುತ್ತಿದ್ದಾರೆ.
ವಾರದಿಂದ ಥಂಡಿ ಗಾಳಿ, ಮಳೆಯಿಂದ ಜ್ವರ, ಕೆಮ್ಮು, ನೆಗಡಿ, ಬಾಧೆಪಡುತ್ತಿದ್ದ ಜನರು, ಇತ್ತೀಚೆಗೆ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದಾರೆ.10 ದಿನಗಳಲ್ಲಿ ಎರಡನೇಬಾರಿಗೆ ಮೋಡ ಕವಿದ ವಾತಾವರಣ ಜೊತೆಗೆ ಮಳೆಯಾಗುತ್ತಿದ್ದರಿಂದ ರೋಗಬಾಂಧ ಮತ್ತಸ್ಟು ಹೆಚ್ಚಾಗುವ ಆತಂಕ ಮನೆ ಮಾಡಿದೆ.
ಫೆಂಗಲ್ ಚಂಡಮಾರತ ಹಾನಿಯಿಂದ ಇದೀಗ ಸುಧಾರಿಸಿಕೊಳ್ಳುತ್ತಿರುವಾಗಲೇ ಮತ್ತೆರಡು ವಾಯುಭಾರ ಕುಸಿತ ಸೃಷ್ಟಿಯಾಗುವ ಲಕ್ಷಣ ಬಂಗಾಳಕೊಲ್ಲಿಯಲ್ಲಿ ಕಂಡು ಬರುತ್ತಿದೆ.
ಮೊದಲ ವಾಯುಭಾರ ಕುಸಿತ ಒಂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 14 ಹಾಗೂ 15 ರಂದು ಮಳೆಯಾಗಲಿದೆ.
2ನೇ ವಾಯುಭಾರ ಕುಸಿತ ಡಿಸೆಂಬರ್ 16 ರ ಬಳಿಕ ರೂಪಗೊಳ್ಳಲಿದ್ದು, ಇದರಿಂದ ಡಿಸೆಂಬರ್ 17 ರಿಂದ 18 ರಂದು ರಾಜ್ಯದಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ಬಹುತೇಕ ಬೆಳೆಗಳು ಕಟಾವಿಗೆ ಬಂದಿದ್ದು, ರೈತರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಹವಾಮಾನ ತಜ್ಞ ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ.
cyclone heavy rain : ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ?ಈ ಕೆಳಗಿನ ನಂಬರಿಕೆ ಕರೆ ಮಾಡಿ
ನಿಮ್ಮೂರಿನ ಸುತ್ತಮುತ್ತ ಯಾವಾಗ ಮಳೆಯಾಗುತ್ತದೆ ಎಂಬ ಮಾಹಿತಿ ಪಡೆಯಲು ನೀವು ಇಲ್ಲಿ ನೀಡಲಾಗಿರುವ ನಂಬರಿಗೆ ಕರೆ ಮಾಡಿದರೆ ಸಾಕು,ನಿಮಗೆ ಕುಳಿತಲ್ಲೇಮಾಹಿತಿ ಸಿಗಲಿದೆ.
ಹೌದು,92433 45433 ನಂಬರಿಗೆ ಕರೆ ಮಾಡಿದರೆ ಸಾಕು ನಿಮಗೆ ಅಂದಿನ ಹವಾಮಾನ ಮಳೆ ಮಾಹಿತಿ ಸಿಗಲಿದೆ. ಇದಕ್ಕಾಗಿ ನೀವು ಯಾವ ಶುಲ್ಕ ಪಾವತಿಸಬೇಕಿಲ್ಲ. ಉಚಿತವಾಗಿ ರೈತರು ಮನೆಯಲ್ಲಿಯೇ ಕುಳಿತು ಮಾಹಿತಿ ಪಡೆಯಬಹುದು.
ಇದನ್ನೂ ಓದಿ :
ನಿಮಗೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ. ಇದರೊಂದಿಗೆ ಗಾಳಿಯ ವೇಗ ಮಳೆಯ ಪ್ರಮಾಣ ಸೇರಿದಂತೆ ಹವಾಮಾನ ವರದಿಯ ಇನ್ನಿತರ ಮಾಹಿತಿ ಸಿಗಲಿದೆ.
Heavy rain alert today ಮೇಘದೂತ್ ಆ್ಯಪ್ ನಲ್ಲಿ ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ
ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.